X Close
X

ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಕೊಡಗನೂರ ಜಯಕುಮಾರ ನಿಧನ


jayakumar-1

ದಾವಣಗೆರೆ: ಜ್ಯೂ.ರಾಜ್ ಕುಮಾರ್ ಖ್ಯಾತಿಯ, ಹಿರಿಯ ರಂಗಕರ್ಮಿ, ನಟ ಕೊಡಗನೂರ ಜಯಕುಮಾರ್ ನಿಧನರಾಗಿದ್ದಾರೆ. ಜ್ಯೂ.ರಾಜ್ ಕುಮಾರ್ ಖ್ಯಾತಿಯ, ಹಿರಿಯ ರಂಗಕರ್ಮಿ, ನಟ ಕೊಡಗನೂರ ಜಯಕುಮಾರ್ (70) ಅ.06 ರಂದು ನಿಧನರಾಗಿದ್ದಾರೆ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

100 ಕ್ಕೂ ಹೆಚ್ಚು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಜಯಕುಮಾರ್ ಗೆ 2019 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ದಾವಣಗೆರೆಯ ಕೊಗನೂರ ಗ್ರಾಮದ ಮೂಲದವರಾಗಿದ್ದ ಜಯಕುಮಾರ್ ಜ್ಯೂ.ರಾಜ್ ಕುಮಾರ್ ಎಂದೇ ಖ್ಯಾತರಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

(KANNADA PRABHA)