ನವದೆಹಲಿ: ಸ್ಪೈಸ್ ಜೆಟ್ ವಿಮಾನ ಸಂಸ್ಥೆ 20 ಹೊಸ ವಿಮಾನ ಸೇವೆಗಳನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಘೋಷಿಸಿದೆ.
ದಿನಂಪ್ರತಿ ಈ ವಿಮನ ಸೇವೆಗಳ ಸೌಲಭ್ಯ ಇರಲಿದ್ದು, ಗುವಾಹಟಿ-ಪಾಟ್ನಾ, ಹೈದರಾಬಾದ್-ಮಂಗಳೂರು, ಬೆಂಗಳೂರು-ಜಬಲ್ಪುರ್, ಪಾಟ್ನಾ-ವಾರಾಣಸಿ, ಮುಂಬೈ-ಔರಂಗಾಬಾದ್ ಮಾರ್ಗಗಳಲ್ಲಿ ಹೊಸ ವಿಮಾನ ಸೇವೆಗಳು ಉಡಾನ್ ಯೋಜನೆಯಡಿ ಮಾ.29 ರಿಂದ ಕಾರ್ಯಾರಂಭ ಮಾಡಲಿವೆ.
ಹೊಸ ವಿಮಾನ ಸೇವೆಗಳ ಮೂಲಕ ಸಂಸ್ಥೆ ಪ್ರಾದೇಶಿಕ ಸಂಚಾರ ವ್ಯಾಪ್ತಿಯಲ್ಲಿ ಒಟ್ಟಾರೆ 52 ವಿಮಾನಗಳ ಸಂಚಾರವನ್ನು ಹೊಂದಲಿದ್ದು, 12 ನಗರಗಳನ್ನು ಸಂಪರ್ಕಿಸಲಿದೆ.
ಮುಂಬೈ-ಬಾಗ್ದೋಗ್ರಾ, ಮುಂಬೈ-ಚೆನ್ನೈ- ಹೈದರಾಬಾದ್-ಮಂಗಳೂರು, ಗುವಾಹಟಿ-ದೆಹಲಿ ಮಾರ್ಗಗಳಲ್ಲಿ ಹೆಚ್ಚುವರಿ ವಿಮಾನ ಸೇವೆಗಳನ್ನು ಒದಗಿಸುವುದಾಗಿಯೂ ಸ್ಪೈಸ್ ಜೆಟ್ ಹೇಳಿದೆ.