X Close
X

ವ್ಯಕ್ತಿಗೆ ಕಪಾಳಮೋಕ್ಷ: ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲು!


mahesh-manjrekar

ಮುಂಬೈ: ವ್ಯಕ್ತಿಯೋರ್ವನಿಗೆ ಕಪಾಳಕ್ಕೆ ಬಾರಿಸಿ ಆರೋಪದ ಮೇಲೆ ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಾಹನ ಡಿಕ್ಕಿ ಬಳಿಕ ಮಹೇಶ್ ಮಾಂಜ್ರೇಕರ್ ವ್ಯಕ್ತಿಯೋರ್ವನಿಗೆ ಕಪಾಳಕ್ಕೆ ಹೊಡೆದು ನಿಂದಿಸಿದ್ದರು. ಪುಣೆ-ಸೋಲಾಪುರ ಹೆದ್ದಾರಿಯಲ್ಲಿ ಘಟನೆ ನಡೆದಿತ್ತು. 

ಮಹೇಶ್ ಮಾಂಜ್ರೇಕರ್ ಚಲಿಸುತ್ತಿದ್ದ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಮಾಂಜ್ರೇಕರ್ ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಆಗ ಕೈಲಾಸ್ ಸತ್ಪುತೆ ಮೇಲೆ ಮಾಂಜ್ರೇಕರ್ ಹಲ್ಲೆ ಮಾಡಿದ್ದಾರೆ. 

(KANNADA PRABHA)