X Close
X

ವಿದೇಶಿ ನೆಲದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ರಗ್ಬಿ ವನಿತೆಯರ ತಂಡ!


Rugby-Team
ನವದೆಹಲಿ: ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.

ಏಷ್ಯಾ ರಗ್ಬಿ ವುಮೆನ್ಸ್ ಚಾಂಪಿಯನ್ ಡಿವಿಷನ್ 1 ಹಣಾಹಣಿಯಲ್ಲಿ ಸುಮಿತ್ರಾ ನಾಯಕ್ ಅವರ ಸಾಹಸದ ಫಲವಾಗಿ ಭಾರತ ಮಹಿಳಾ ತಂಡ ಸಿಂಗಾಪುರ ತಂಡವನ್ನು 21-19 ಅಂಕಗಳಿಂದ ಸೋಲಿಸಿದೆ.

ಈ ಜಯದೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿಕೊಂಡಿದೆ. ಮಹಿಳಾ ರಗ್ಬಿ ತಂಡದ ಈ ಅತ್ಯುತ್ತಮ ಸಾಧನೆ ದೇಶಾದ್ಯಂತ ಸಂಭ್ರಮದ ಅಲೆಯನ್ನೇ ಹುಟ್ಟುಹಾಕಿದೆ. (KANNADA PRABHA)