X Close
X

ರಾಜ್ಯದಲ್ಲಿ ಕೊರೋನಾ ವೈರಸ್ ಇಲ್ಲ, ಆದರೂ ಮುಂದುವರೆದ ಕಟ್ಟೆಚ್ಚರ


corona-mangaluru

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಯಾರಿಗೂ ಕೊರೋನಾ ವೈರಸ್ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಕೊರೋನಾ ವೈರಸ್ ಸೋಂಕು ಲಕ್ಷಣಗಳು ಕಾಣಿಸಿಕೊಂಡ 52 ಮಂದಿಯ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ವರದಿ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ತುಮಕೂರಿನಲ್ಲಿ ಚೀನಾ ಮೂಲಕ ವಿದ್ಯಾರ್ಥಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದು ಈ ಹಿಂದೆ ವರದಿಯಾಗಿತ್ತು. 

ವ್ಯಕ್ತಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷೆ ಬಳಿಕ ಸೋಂಕಿಲ್ಲದಿರುವುದು ದೃಢಪಟ್ಟಿದೆ. ಆದರೂ ಸುರಕ್ಷತಾ ದೃಷ್ಟಿಯಿಂದ 28 ದಿನಗಳ ಕಾಲ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬುಧವಾರ 6 ಮಂದಿ ಹೊಸ ಪ್ರಯಾಣಿಕರು ನಿಗಾದಲ್ಲಿರಲು ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೂ ಸೋಂಕು ದೃಢಪಟ್ಟಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ. 

(KANNADA PRABHA)