X Close
X

ಮೈಸೂರು: ಜನರ ಚಲನವಲನಗಳನ್ನು ಗಮನಿಸಲು ಡ್ರೋಣ್ ಮೊರೆ ಹೋದ ಪೊಲೀಸರು!


drone-ne

ಮೈಸೂರು: ನಗರದ ಎನ್ ಆರ್ ಮೊಹಲ್ಲಾದಲ್ಲಿ ಸಾರ್ವಜನಿಕರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ  ನಗರ ಪೊಲೀಸರು ಅವರ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದಾರೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರು ಗುಂಪು ಗೂಡಿ ಧಾರ್ಮಿಕ ಸ್ಥಳಕ್ಕೆ ಬರುತ್ತಿದ್ದರು, ಹೀಗಾಗಿ ಕೆಜಿ ಕೊಪ್ಪಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಡ್ರೋಣ್ ಕ್ಯಾಮೆರಾ ಮೂಲಕ ಯಾರ್ಯಾರು ನಿಯಮ ಉಲ್ಲಂಘಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

(KANNADA PRABHA)