X Close
X

ಭಾರತದಲ್ಲಿ ಕೊರೋನಾ ಹೆಚ್ಚಳ, ಐಪಿಎಲ್‌ ಟೂರ್ನಿಗೆ ಆತಿಥ್ಯ ವಹಿಸಲು ಯುಎಇ ಸಿದ್ಧತೆ


IPL

ದುಬೈ: ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಒಂದು ವೇಳೆ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಮುಂದಾದರೆ ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮತ್ತು ಈವೆಂಟ್‌ಗಳ ಮುಖ್ಯಸ್ಥ ಸಲ್ಮಾನ್ ಹನೀಫ್ ಹೇಳಿದ್ದಾರೆ.

ಐಪಿಎಲ್ ಗಾಗಿ ನಾವು ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸುತ್ತಿದ್ದೇವೆ. ಅಕ್ಟೋಬರ್ 18ರಿಂದ ನವೆಂಬರ್ 15 ರ ನಡುವೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಬಗ್ಗೆ ಅನಿಶ್ಚಿತತೆ ಇರುವುದರಿಂದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಐಪಿಎಲ್ ಆಯೋಜಿಸಬಹುದು ಸಲ್ಮಾನ್ ಹನೀಫ್ ತಿಳಿಸಿದ್ದಾರೆ.

ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ಹನೀಫ್ ಈ ಟಿ 20 ಲೀಗ್‌ಗೆ ಸಂಭವನೀಯ ಸ್ಥಳವಾಗಿ ದುಬೈ ಸ್ಪೋರ್ಟ್ಸ್ ಸಿಟಿ ಸಿದ್ಧವಾಗಿದೆ. ಸ್ಪೋರ್ಟ್ಸ್ ಸಿಟಿ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮತ್ತು ಐಸಿಸಿ ಅಕಾಡೆಮಿಯನ್ನು ಒಳಗೊಂಡಿದೆ  ಎಂದು ತಿಳಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 29ರಂದೇ ನಡೆಯಬೇಕಿತ್ತು. ಆದರೆ, ಕೊರೋನಾ ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದ್ದರಿಂದ ಐಪಿಎಲ್‌ ಟೂರ್ನಿಯನ್ನು ಮುಂದೂಡಲಾಗಿದೆ.

(KANNADA PRABHA)