X Close
X

ತನ್ನನ್ನು ಕಂಡು ಹಸ್ತಮೈಥುನ ಮಾಡಿಕೊಂಡ ವಿಕೃತ ವ್ಯಕ್ತಿ ವಿರುದ್ಧ ವೀಡಿಯೋ ಸಾಕ್ಷಿ ನೀಡಿದ ಯುವತಿ


flashing
ಬೆಂಗಳೂರು: ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳ ಸಮಯೋಚಿತ ಆಲೋಚನೆಯು ಆಕೆಯನ್ನು ಕಾಡುತ್ತಿದ್ದ ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿತು.

ಸೋಮವಾರ ಮಧ್ಯಾಹ್ನ 2.30 ರ ಸುಮಾರಿಗೆ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ರಿಯಾ (ಹೆಸರು ಬದಲಿಸಲಾಗಿದೆ)ವೈಟ್‌ಫೀಲ್ಡ್‌ನ ಪಟ್ಟಂದೂರು ಅಗ್ರಹಾರ ಕೆರೆಗೆ ಭೇಟಿಕೊಟ್ಟು ಕೆರೆಯ ಸ್ಥಿತಿಗತಿ ಕುರಿತು ಸಂಶೋಧನೆ ನಡೆಸಲು ಮುಂದಾಗಿದ್ದರು.ಆಕೆ ಕೆರೆ ಸಮೀಪದಲ್ಲಿದ್ದಾಗ ಕೆರೆಯ ಸಂರಕ್ಷಿತ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕೊಳಗೇರಿಯಲ್ಲಿನ ವ್ಯಕ್ತಿಯೊಬ್ಬ ತನ್ನನ್ನು ಗಮನಿಸುತ್ತಿರುವುದು ಕಂಡುಕೊಂಡಲು.ಮೊದಲಿಗೆ ರಿಯಾ ಆತನ ಬಗೆಗೆ ಅಸಡ್ಡೆ ಹೊಂದಿದಳು. ಆದರೆ ಆ ವ್ಯಕ್ತಿ ನಿರಂತರವಾಗಿ ತನ್ನನ್ನೇ ಗಮನಿಸುತ್ತಿದ್ದು ತನ್ನತ್ತಲೇ ಫ್ಲಾಶ್ ಮಾಡುತ್ತಿರುವುದನ್ನು ಕಂಡ ರಿಯಾ ಭೀತಿಗೊಳಗಾಗಿದ್ದಾಳೆ.“

“ನಾನು ಕೆಲಸದ ನಿಮಿತ್ತ ಕೆರೆಗೆ ಬರಬೇಕಾದ ಯಾರನ್ನಾದರೂ ಕಾಯುತ್ತಿದ್ದೆ. ಈ ವ್ಯಕ್ತಿಯು ನನ್ನನ್ನೇ ದಿಟ್ಟಿಸುತ್ತಿರುವುದನ್ನು ನಾನು ನೋಡಿದೆ, ಆದರೆ ನಾನು ಅದನ್ನು ನಿರ್ಲಕ್ಷಿಸಿದೆ. ಅವನು ಅಲ್ಲಿಂದ ಚಲಿಸಲಿಲ್ಲ ಮತ್ತು ನಾನು ಅವನನ್ನು ಮತ್ತೆ ನೋಡಿದಾಗ ಅವನು ನನ್ನನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದ. ಅಲ್ಲದೆ ಅವನು ಮಾಡುತ್ತಿದ್ದುದನ್ನು ಕಂಡು ನನಗೆ ಅಸಹ್ಯವಾಯಿತು. ತಕ್ಷಣ ನನ್ನ ಫೋನ್ ತೆಗೆದುಕೊಂಡು ಅವನು ಈ ಕೃತ್ಯವನ್ನು ಪ್ರದರ್ಶಿಸುವ ವೀಡಿಯೊವನ್ನು ಚಿತ್ರೀಕರಿಸಿದೆ ”ಎಂದು ರಿಯಾ ಹೇಳಿದರು.

ಕೆರೆ ಆವರಣದಿಂದ ದೂರ ಬಂದ ರಿಯಾಳನ್ನು ಆ ವಿಕೃತ ಮನಸ್ಸಿನ ವ್ಯಕ್ತಿ ಮತ್ತೆ ಹಿಂಬಾಲಿಸಿದ್ದ. ಆಟೋರಿಕ್ಷಾ ಅಥವಾ ಕ್ಯಾಬ್ ಅನ್ನು ಕರೆಯಲು ಅವಳು ಮುಖ್ಯ ರಸ್ತೆಯಲ್ಲಿ ನಿಂತಾಗ ಗ, ಆ ವ್ಯಕ್ತಿ ಹತ್ತಿರದ ಮರದ ಹಿಂದೆ ಅಡಗಿಕೊಂಡು ಮತ್ತೆ ಅಸಹ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದ. ಅಲ್ಲದೆ ಆತ ಅವಳ ಕಡೆ ನೋಡಿ ಸನ್ನೆಯನ್ನು ಂಆಡಿದ್ದಾನೆ. ಅವಳನ್ನು ತನ್ನೊಂದಿಗೆ ಸೇರಲು ಕೇಳಿಕೊಂಡಿದ್ದಾನೆ. "ಮರದ ಹಿಂದೆ ಅಡಗಿರುವಾಗ ಅವನು ಮತ್ತೆ ಅಸಹ್ಯವಾಗಿ ವರ್ತಿಸಿದ್ದ. ನಾನು ಎರಡನೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೆ. ನಾನು ಕ್ಯಾಬ್ ಪಡೆದುಕೊಂಡು ನೇರವಾಗಿ ಎಫ್‌ಐಆರ್ ದಾಖಲಿಸಲು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಹೋದೆ ”ಎಂದು ರಿಯಾ ಹೇಳಿದರು.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆಆರೋಪಿಗಳನ್ನು ಸುಲಭವಾಗಿ ಗುರುತಿಸಲು ಮತ್ತು ಆತನನ್ನು ಬಂಧಿಸಲು ಸಹಾಯ ಮಾಡಿದ ವೀಡಿಯೊಗಳನ್ನು ಅವಳು ಪೊಲೀಸರಿಗೆ ತೋರಿಸಿದಳು.

ವಿಡಿಯೋ ಆಧರಿಸಿ, ನಾವು ಆ ವ್ಯಕ್ತಿಯನ್ನು ಗುರುತಿಸಿ ಆತನನ್ನು ಬಂಧಿಸಿ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಬುಕ್ ಮಾಡಿದ್ದೇವೆ. ನಂತರ ನಾವು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರುವಿವರಿಸಿದರು. (KANNADA PRABHA)