X Close
X

ತನ್ನದೇ ಆದ ಏಕದಿನ ವಿಶ್ವ ದಾಖಲೆ ಮುರಿದ ಇಂಗ್ಲೆಂಡ್, 500 ರನ್ ಗಡಿ ಸ್ವಲ್ಪದರಲ್ಲೇ ಮಿಸ್!


England

ಆಮ್ಸ್ಟೆಲ್ವೀನ್: ಇಂಗ್ಲೆಂಡ್ ತನ್ನದೆ ಆದ ಏಕದಿನ ಗರಿಷ್ಟ ರನ್ ಮೊತ್ತದ ದಾಖಲೆಯನ್ನು ಮುರಿದ್ದು ಆದರೆ 500 ರನ್ ಗಡಿ ದಾಟುವಲ್ಲಿ ವಿಫಲವಾಗಿದೆ. 

2018ರಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ  481 ರನ್ ಬಾರಿಸಿ ವಿಶ್ವದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ನೆದರ್ಲ್ಯಾಂಡ್ ನ ಮೊದಲ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ 498 ರನ್ ಬಾರಿಸುವ ಮೂಲಕ ಹೊಸ ಏಕದಿನ ದಾಖಲೆಯನ್ನು ನಿರ್ಮಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಪೇರಿಸಿದೆ. ಇಂಗ್ಲೆಂಡ್ ಪರ ಫಿಲ್ ಸಾಲ್ಟ್ 122, ಡೇವಿಡ್ ಮಲನ್ 125 ಹಾಗೂ ಜೋಸ್ ಬಟ್ಲರ್ ಅಜೇಯ 70 ಎಸೆತಗಳಲ್ಲಿ 14 ಸಿಕ್ಸರ್ ಸೇರಿದಂತೆ 162 ರನ್ ಬಾರಿಸಿದ್ದಾರೆ. 

ಇಂಗ್ಲೆಂಡ್ ನೀಡಿದ 499 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ 24 ಓವರ್ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 124 ರನ್ ಪೇರಿಸಿದೆ.

(KANNADA PRABHA)