X Close
X

ಡ್ರಗ್ಸ್ ಜಾಲದ ನಂಟು ಪ್ರಕರಣ: ರಿಯಾಗೆ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು, ಶೋವಿಕ್ ಗೆ ಜೈಲೇ ಗತಿ


Showik-Chakraborty-Rhea

ಮುಂಬೈ: ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೂ ಜಾಮೀನು ದೊರಕಿದೆ.
ರಿಯಾ ಅವರಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿದ್ದರೆ, ಆಕೆಯ ಸಹೋದರ ಶೋಯಿಕ್ ಮತ್ತು ಅಬ್ದೆಲ್ ಬಸಿತ್ ಪರಿಹಾರ್ ಅವರ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ರಿಯಾ ಅವರನ್ನು ಸೆಪ್ಟೆಂಬರ್ 8 ರಂದು ಎನ್‌ಸಿಬಿ ಮಾದಕವಸ್ತು ಕಾಯ್ದೆಯಡಿ ಬಂಧಿಸಿ ಸ್ಥಳೀಯ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿತ್ತು. ಆಕೆಯನ್ನು ಬೈಕುಲ್ಲಾ ಮಹಿಳಾ ಜೈಲಿನಲ್ಲಿ ಇರಿಸಲಾಗಿತ್ತು.

ಮಾದಕವಸ್ತು ನಿಯಂತ್ರಣ ಸಂಸ್ಥೆ ಎನ್‍ ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ, 28 ದಿನಗಳ ನಂತರ ಜೈಲಿನಿಂದ ಹೊರಬರುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾದಕ ಸೇವನೆಯ ಚಟ ಅಂಟಿಸಿದ್ದ ಆರೋಪನ್ನು ರಿಯಾ ಎದುರಿಸುತ್ತಿದ್ದು, ಜಾರಿ ನಿರ್ದೇಶನಾಲಯ ಇಡಿ ಹಾಗೂ ಎನ್ ಸಿಬಿ ಕೂಡ ತನಿಖೆ ಕೈಗೊಂಡಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಿಯಾ ಚಕ್ರವರ್ತಿ ಮತ್ತು ಕುಟುಂಬದವರ ವಿರುದ್ಧ ಸುಶಾಂತ್ ಸಿಂಗ್ ತಂದೆ ಪ್ರಕರಣ ದಾಖಲಿಸಿದ್ದರು.

ಸುಶಾಂತ್ ಸಿಂಗ್ ಸಾವಿನ ತನಿಖೆ ಕೈಗೊಂಡಿರುವ ತನಿಖಾ ಸಂಸ್ಥೆ ಸಿಬಿಐಗೆ ಮಾದಕ ಜಾಲದ ನಂಟಿರುವುದು ಪತ್ತೆಯಾಗಿದ್ದು, ಆ ಬಗ್ಗೆ ತನಿಖೆ ಮುಂದುವರಿಸಿದೆ.

(KANNADA PRABHA)