X Close
X

ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ವಿದಾಯ: ಸೌರವ್, ಸಚಿನ್ ಹೇಳಿದ್ದೇನು?


Virat_Kolhi_Ganguly

ನವದೆಹಲಿ: ಭಾರತದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತಿತರರು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ, ಮಾಜಿ  ನಾಯಕ ಕೊಹ್ಲಿಯನ್ನು ಗಂಗೂಲಿ ಶ್ಲಾಘಿಸಿದ್ದು,  ಪ್ರಸ್ತುತ ತಂಡವನ್ನು ಮುನ್ನಡೆಸುವಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಿದ್ದಾರೆ. 

"ವಿರಾಟ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಲ್ಲಾ ಮಾದರಿಗಳಲ್ಲಿ ಕ್ಷಿಪ್ರ ದಾಪುಗಾಲುಗಳನ್ನು ಮಾಡಿದೆ ..ಅವರ ನಿರ್ಧಾರವು ವೈಯಕ್ತಿಕವಾಗಿದೆ ಮತ್ತು ಬಿಸಿಸಿಐ ಅದನ್ನು ಅಪಾರವಾಗಿ ಗೌರವಿಸುತ್ತದೆ.ಭವಿಷ್ಯದಲ್ಲಿ ಈ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವರು ಪ್ರಮುಖ ಸದಸ್ಯರಾಗಿದ್ದಾರೆ. ಅವರು ಅತ್ಯುತ್ತಮ ಆಟಗಾರ. ವೆಲ್ ಡನ್ @BCCI @imVkohli ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿನ್ ತೆಂಡೊಲ್ಕರ್, ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ನೀವು ತಂಡಕ್ಕಾಗಿ ಯಾವಾಗಲೂ ಶೇ. 100 ರಷ್ಟು ತೊಡಿಸಿಕೊಂಡಿದ್ದೀರಿ. ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ. 

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೊಹ್ಲಿ ಅವರದ್ದು ಗಮನಾರ್ಹ ಪ್ರಯಾಣವಾಗಿದೆ. ಕೆಲವೇ ಕೆಲವರು ಸಾಧಿಸಿದ್ದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ನೀವು ಪ್ರತಿ ಬಾರಿ ನಿಜವಾದ ಚಾಂಪಿಯನ್ ರೀತಿ ಆಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್, ಆಟದ ಬಗೆಗಿನ ನಿಮ್ಮ ಉತ್ಸಾಹ ನಮಗೆ ಸ್ಫೂರ್ತಿಯಾಗಲಿದೆ. ಧನ್ಯವಾದಗಳು ಕ್ಯಾಪ್ಟನ್ ಎಂದು ಟ್ವೀಟ್ ಮಾಡಿದ್ದಾರೆ.

(KANNADA PRABHA)