X Close
X

ಜಡೇಜಾಗೇ ಗೂಗ್ಲಿ: ಪತ್ನಿಯದ್ದು ಒಂದು ದಾರಿಯಾದರೆ ಸಹೋದರಿ, ತಂದೆಯದ್ದು ಮತ್ತೊಂದು!


jadeja-1
ಗುಜರಾತ್: ಮೈದಾನದಲ್ಲಿ ಗೂಗ್ಲಿ ಎಸೆತದಿಂದ ಬ್ಯಾಟ್ಸ್ ಮನ್ ಗಳನ್ನು ಪೇಚಿಗೆ ಸಿಲುಕಿಸುವ ಸ್ಪಿನ್ನರ್ ರವೀಂದ್ರ ಜಡೇಜಾಗೇ ಕುಟುಂಬ ಸದಸ್ಯರು ಗೂಗ್ಲಿ ಎಸೆದಿದ್ದಾರೆ.

ಏನು ರವೀಂದ್ರ ಜಡೇಜಾಗೆ ಕುಟುಂಬ ಸದಸ್ಯರು ಬೌಲಿಂಗ್ ಮಾಡ್ತಾರಾ ಅಂತ ಗೊಂದಲಕ್ಕೀಡಾಗಬೇಡಿ. ಇದು ರಾಜಕೀಯದ ವಿಷಯ. ಹೌದು, ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸೋಲಂಕಿ ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಬೆನ್ನಲ್ಲೇ ಜಡೇಜಾ ತಂದೆ ಹಾಗೂ ಜಡೇಜಾ ಸಹೋದರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಏ.14 ರಂದು ಜಡೇಜಾ ಅವರ ತಂದೆ ಅನಿರುದ್ಧ್ ಸಿನ್ಹಾ ಹಾಗೂ ಸಹೋದರಿ ನೈನಬಾ, ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸಮ್ಮುಖದಲ್ಲಿ ಗುಜರಾತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. (KANNADA PRABHA)