X Close
X

ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ತವರು ಮನೆಯಷ್ಟೇ ಸಂತಸ‌ ನೀಡಿದೆ: ಬಿಸಿ ಪಾಟೀಲ್


BC-patil
Bengaluru:

ಚಿತ್ರದುರ್ಗ: ಚಿತ್ರದುರ್ಗಕ್ಕೆ ಬಂದಿರುವುದು ತವರುಮನೆಯಷ್ಟೆ ಸಂತಸ ನೀಡಿದೆ. ಚಿತ್ರದುರ್ಗ ಜಿಲ್ಲೆಗೆ ಉತ್ತಮವಾದ ಭವಿಷ್ಯ ಕೊಡಲು ಸಾಧ್ಯವಾದಷ್ಟು ಪ್ರಾಮಾ಼ಣಿಕ ಪ್ರಯತ್ನ ಮಾಡುತ್ತೇನೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

ಚಿತ್ರದುರ್ಗ-ಗದಗ ಜಿಲ್ಲೆಗಳ ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ಬಿ.ಸಿ.ಪಾಟೀಲ್ ಅವರನ್ನು ನೇಮಿಸಿದ್ದು, ಚಿತ್ರದುರ್ಗದಲ್ಲಿ ಗಣರಾಜ್ಯೋತ್ಸವ‌ ಪ್ರಯುಕ್ತ ಧ್ಚಜಾರೋಹಣ ನೆರವೇರಿಸುವ ಮೂಲಕ ಉಸ್ತುವಾರಿ ಜವಾಬ್ದಾರಿಯನ್ನು ಬಿ.ಸಿ.ಪಾಟೀಲ್ ಹೊತ್ತುಕೊಂಡಿದ್ದಾರೆ.

ಹಿಂದೆ ಹಿರಿಯೂರು ಚಿತ್ರದುರ್ಗದಲ್ಲಿ 1985-94ರವರೆಗೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಚಿತ್ರದುರ್ಗ ಜಿಲ್ಲೆಯಿಂದಲೇ ಚಿತ್ರರಂಗ ಪ್ರವೇಶಿಸಿ, ರಾಜಕಾರಣಿಯಾದೆ. ಅನಿರೀಕ್ಷಿತವಾಗಿ ಚಿತ್ರದುರ್ಗ ಉಸ್ತುವಾರಿಯಾಗಿದ್ದು ಬಹಳ ಸಂತಸ ನೀಡಿದೆ. ಚಿತ್ರದುರ್ಗಕ್ಕೆ ಬಂದಿರುವುದು ತವರು ಮನೆಯಷ್ಟೆ ಸಂತಸ ತಂದಿದೆ. ಇಂದು ತಮ್ಮೆಲ್ಲರಿಂದ ಗೌರವ ಸ್ವೀಕರಿಸುವ ಅದೃಷ್ಟ ನೀಡಿದ್ದಕ್ಕೆ ಧನ್ಯವಾದಗಳನ್ನು ಬಿಸಿಪಿ ಭಾಷಣ ಮೂಲಕ ಜನತೆಗೆ ಅರ್ಪಿಸಿದರು.

ಚಿತ್ರದುರ್ಗ ಜಿಲ್ಲೆಯೆಂದರೆ ವಾಣಿವಿಲಾಸ ಸಾಗರ ನೆನಪಾಗುತ್ತದೆ. ಹಿಂದೆ ಇದು ನಾವಿದ್ದಾಗ ತುಂಬದೇ ಸುಮಾರು 70 ಅಡಿಯಷ್ಟೇಯಿತ್ತು. ಈಗ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ತುಂಬಿದೆ. ಚಿತ್ರದುರ್ಗ ಜಿಲ್ಲೆಯ ಜನರ ಗುಣ, ಇಲ್ಲಿನ‌ ಮಣ್ಣಿನ ವಾಸನೆ‌ ಗೊತ್ತಿದೆ.ಇಲ್ಲಿ ಕಲ್ಲುಮುಳ್ಳಾದರೂ ವೀರಮದಕರಿಯ ನಾಡಿನ ಇಲ್ಲಿನ ಜನರು‌ ಮೃದುವಾದ ಹೃದಯವಂತರು. ಚಿತ್ರದುರ್ಗ ಜಿಲ್ಲೆ ಸಿರಿಧಾನ್ಯಗಳಿಗೆ ಹೆಸರಾಗಿದೆ. ಹೊಳಲ್ಕೆರೆ, ಚಳ್ಳಕೆರೆ ಈ ಭಾಗದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. 2023ಕ್ಕೆ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗುತ್ತಿದೆ. ಕೋವಿಡ್ ಪರಿಸ್ಥಿರಿಯನ್ನು ನೋಡಿಕೊಂಡು ಈ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮೇಳವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.