ಗಣೇಶ್ ಅಭಿನಯದ ಬಾನದಾರಿಯಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ಸರ್ಫಿಂಗ್ ಸಾಹಸ ಮಾಡಲಿದ್ದಾರೆ. ಚಿತ್ರದ ಲೀಲಾ ಪಾತ್ರಕ್ಕಾಗಿ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬಾನ ದಾರಿಯಲ್ಲಿ ಸಿನಿಮಾದಲ್ಲಿನನ್ನದು ಲೀಲಾ ಎಂಬ ಸರ್ಫಿಂಗ್ ಆಟಗಾರ್ತಿಯ ಪಾತ್ರ. ಇದಕ್ಕಾಗಿ ಕೆಲವು ದಿನಗಳಿಂದ ಮಂಗಳೂರು ಬಳಿಯ ಮುಲ್ಕಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಸರ್ಫಿಂಗ್ ಗೇಮ್ ಬಹಳ ಖುಷಿ ಕೊಡುವ ಆಟ. ಒಂದರ್ಥದಲ್ಲಿ ಥ್ರಿಲ್ಲಿಂಗ್ ಗೇಮ್ ಎಂದೂ ಹೇಳಬಹುದು. ಚಿತ್ರೀಕರಣಕ್ಕಾಗಿ ಮೂರ್ನಾಲ್ಕು ದಿನಗಳಿಂದ ಈ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಆದರೆ ನಿರ್ದೇಶಕ ಪ್ರೀತಂ ಗುಬ್ಬಿಯವರು ತೆರೆಯ ಮೇಲೆ ಎಲ್ಲಿಯೂ ಲೀಲಾ ಈಗಷ್ಟೇ ಸರ್ಫಿಂಗ್ ಕಲಿತಿದ್ದಾಳೆ ಎಂದು ಅನಿಸಬಾರದು ಎಂಬಂತೆ ತರಬೇತಿ ಕೊಡಿಸುತ್ತಿದ್ದಾರೆ.
ನಾನು ಸ್ವಿಮ್ಮಿಂಗ್ ಮಾಡುತ್ತೇನೆ, ಆದರೆ ನನಗೆ ನೀರೆಂದರೇ ಭಯ, ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ನನ್ನನ್ನು ಸ್ಕೂಬಾ ಡೈವಿಂಗ್ ಕರೆದೊಯ್ದಿದ್ದರು, ಇದರಿಂದಾಗಿ ಫೋಬಿಯಾದಿಂದ ಹೊರ ಬರಲು ಸಾಧ್ಯವಾಯಿತು ಎಂದು ರುಕ್ಷ್ಮಿಣಿ ವಸಂತ್ ಹೇಳಿದ್ದಾರೆ.
ನನ್ನ ಪಾತ್ರದ ಬಗ್ಗೆ ಅವರ ಇಮ್ಯಾಜಿನೇಶನ್ ನನಗೆ ಇಷ್ಟವಾಯಿತು. ಪ್ರೀತಂ ಅವರ ಹಿಂದಿನ ಸಿನಿಮಾಗಳಲ್ಲಿಯೂ ನಾಯಕಿಯ ಪಾತ್ರಗಳಿಗೆ ವಿಶೇಷ ಮಹತ್ವ ಇದ್ದುದನ್ನು ಗಮನಿಸಿದ್ದೇನೆ. ಇಲ್ಲಿನನ್ನನ್ನು ಒಂದು ಕಡೆ ಸ್ಟೈಲಿಶ್ ಅಗಿ ಸರ್ಫಿಂಗ್ ಮೂಲಕ ತೋರಿಸುತ್ತಾರೆ. ಇನ್ನೊಂದು ಕಡೆ ಅಷ್ಟೇ ಭಾವನಾತ್ಮಕವಾಗಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಾರೆ ಎಂದು ರುಕ್ಷ್ಮಿಣಿ ತಿಳಿಸಿದ್ದಾರೆ.
ಬಾನದಾರಿಯಲ್ಲಿ ನಿರ್ಮಾಪಕರು ಇತ್ತೀಚೆಗೆ ಗಣೇಶ್ ಫರ್ಸ್ಟ್ ಲುಕ್ ಅನಾವರಣಗೊಳಿಸಿದ್ದರು: ಒಬ್ಬ ಸರ್ಫರ್ ಮತ್ತು ಆಫ್ರಿಕನ್ ಕಾಡಿನಲ್ಲಿ ಕುಳಿತಿರುವ ಪ್ರಯಾಣಿಕ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಕೂಡ ನಟಿಸಿದ್ದಾರೆ, ಈ ಚಿತ್ರದಲ್ಲಿ ಫೋಟೋ ಗ್ರಾಫರ್ ಪಾತ್ರ.
ಬಾನದಾರಿಯಲ್ಲಿ’ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಬಡವ ರಾಸ್ಕಲ್’ ಸೇರಿದಂತೆ ಹಲವು ಖ್ಯಾತ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರೀತ ಜಯರಾಂ ಈ ಚಿತ್ರದಲ್ಲಿ ಛಾಯಾಗ್ರಹಣ ಮಾಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನದ ಹೊಣೆ ಹೊತ್ತಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
(KANNADA PRABHA)