ಕೇರಳದಲ್ಲಿ ಭಾರಿ ಮಳೆ: ಭೂ ಕುಸಿತಕ್ಕೆ ಇಡೀ ಗ್ರಾಮವೇ ನೆಲಸಮ!
ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪ ಪೂಥುಮಲ ಎಂಬಲ್ಲಿ ಸಂಭವಿಸಿದ ಭಾರೀ ಕುಸಿತಕ್ಕೆ ಇಡೀ ಗ್ರಾಮ ನೆಲಸಮವಾಗಿದ್ದು, ಸುಮಾರು 30ರಿಂದ 40 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ರಾತ್ರಿ ಸುಮಾರು 100 ಎಕರೆಯಷ್ಟು ಭೂಮಿ ಕುಸಿದಿದೆ. ಸ್ಥಳಕ್ಕೆ ಇಂದು ಬೆಳಗ್ಗೆ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದಾಗ ಇಡೀ ಗ್ರಾಮ ಸಂಪೂರ್ಣ ನೆಲಸಮಯವಾಗಿರುವುದು ಕಂಡುಬಂದಿದೆ. ಸುಮಾರು 30ರಿಂದ 40 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಅಧಿಕೃವಾಗಿ ಇನ್ನೂ ತಿಳಿದುಬಂದಿಲ್ಲ. (KANNAD PRABHA)