X Close
X

ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಲ್ಯಾಪ್ ಟಾಪ್: ಷರತ್ತು ಅನ್ವಯ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ


laptop-14

ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಕಾಲೇಜು ಶಿಕ್ಷಣ ಇಲಾಖೆಯಿಂದ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. 

ವಾರ್ಷಿಕ 2.5 ಲಕ್ಷ ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವ ಕುಟುಂಬದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ದೊರೆಯಲಿದೆ. ಈ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಕೋಮು ದ್ವೇಷ ಹರಡಬಾರದು, ಪೋರ್ನ್ ವೆಬ್ ಸೈಟ್ ವೀಕ್ಷಿಸಬಾರದು ವಿದ್ಯಾಭ್ಯಾಸದ ಹೊರತಾದ ಯಾವುದೇ ಅಂಶಗಳಿಗೆ ಲ್ಯಾಪ್ ಟಾಪ್ ಬಳಕೆ ಮಾಡಬಾರದು ಎಂಬ ನಿಬಂಧನೆಗಳನ್ನು ವಿಧಿಸಲಾಗಿದ್ದು ವಿದ್ಯಾರ್ಥಿಗಳಿಂದ ಪ್ರಮಾಣಪತ್ರಕ್ಕೆ ಸಹಿ ಪಡೆಯಲಾಗುತ್ತದೆ. 

ಜ.೦4 ರಂದು ಇಲಾಖೆ ಪ್ರಕಟಿಸಿರುವ ಅಧಿಸೂಚನೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಫಲಾನುಭವಿಗಳು ಷರತ್ತುಗಳನ್ನು ಒಪ್ಪಿ ಪ್ರಮಾಣಪತ್ರಕ್ಕೆ ಸಹಿ ಹಾಕಬೇಕಿದೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ನ ಮೂಲ ಬೆಲೆಯನ್ನು ಕಾಲೇಜಿಗೆ ಪಾವತಿ ಮಾಡಬೇಕಾಗುತ್ತದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದು, ಪೋರ್ನ್ ವೀಕ್ಷಿಸುವುದು, ಕೋಮು ದ್ವೇಷ ಹರಡಿದರೆ ಸೈಬರ್ ಕ್ರೈಮ್ ಕಾನೂನಿನ ಪ್ರಕಾರ ಆ ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. 

(KANNADA PRABHA)