X Close
X

ಕಲಬುರಗಿ: ಸೂರ್ಯ ಗ್ರಹಣದ ವೇಳೆ ಮಕ್ಕಳನ್ನು ಕುತ್ತಿಗೆ ವರೆಗೂ ಹೂತಿದ್ದ ಪೋಷಕರು!


karnataka-1

ಕಲಬುರ್ಗಿ: ಶತಮಾನದ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ. ಈ ಗ್ರಹಣ ಕೆಲವು ವಿಚಿತ್ರ ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವುದನ್ನು ಬೆಳಕಿಗೆ ತಂದಿದೆ. 

ಕಲಬುರ್ಗಿ ಜಿಲ್ಲೆ ತಾಜ್ಸುಲ್ತಾನ್ ಪುರ ಗ್ರಾಮದಲ್ಲಿ ಗ್ರಹಣದ ವೇಳೆ ಮಕ್ಕಳನ್ನು ಕುತ್ತಿಗೆ ವರೆಗೂ ಮಣ್ಣಲ್ಲಿ ಹೂತಿದ್ದು ವರದಿಯಾಗಿದೆ. ಸಂಜನಾ (4), ಪೂಜಾ ಕ್ಯಾಮಲಿಂಗ (6) ಕಾವೇರಿ (11) ಈ ಮೂವರು ಮಕ್ಕಳನ್ನು ಗ್ರಹಣದ ವೆಳೆ ಮಣ್ಣಲ್ಲಿ ಕುತ್ತಿಗೆವರೆಗೂ ಹೂಳಲಾಗಿತ್ತು.

ಈ ಮೂರು ಮಕ್ಕಳು ವಿಶೇಷ ಚೇತನರಾಗಿದ್ದು, ಗ್ರಹಣದ ವೇಳೆ ಈ ರೀತಿ ಮಾಡಿದರೆ ಅಂಗಾಂಗಗಳ ಸಮಸ್ಯೆ ಹೋಗಲಾಡಿಸುವುದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ. ಇನ್ನು ಚಿಂಚೋಳಿ ತಾಲೂಕಿನಲ್ಲಿಯೂ ಇಂಥಹದ್ದೇ ಘಟನೆ ನಡೆದಿದ್ದು, 4 ಮಕ್ಕಳನ್ನು ಕುತ್ತಿಗೆ ವರೆಗೂ ಹೂಳಲಾಗಿತ್ತು.  ವರದಿಗಳ ಪ್ರಕಾರ ಜನವಾದಿ ಮಹಿಳಾ ಸಂಘಟನೆ ಈ ಕೃತ್ಯವನ್ನು ಪ್ರತಿಭಟಿಸಿ ಭಾಗಶಃ ಹೂಳಲಾಗಿದ್ದ ಮಕ್ಕಳನ್ನು ಮೇಲೆತ್ತಿದ್ದಾರೆ. 

ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪಜಿಲ್ಲಾಧಿಕಾರಿ ಬಿ ಶರತ್, ತಹಶಿಲ್ದಾರರನ್ನು ಸ್ಥಳಕ್ಕೆ ಕಳಿಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರ ವಿರುದ್ಧ ದೂರು ದಾಖಲಾಗಿದೆ. 

(KANNADA PRABHA)