X Close
X

ಎಡಿಟ್ ಆಯ್ಕೆಯ ಟೆಸ್ಟಿಂಗ್ ನಲ್ಲಿ ಟ್ವಿಟರ್, ಶೀಘ್ರ 'Edit Tweet' ಬಟನ್


Twitter_logo
Bengaluru:

ನವದೆಹಲಿ: ಖ್ಯಾತ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ಬಳಕೆದಾರರ ಬಹು ಬೇಡಿಕೆಯ ಆಯ್ಕೆ  'Edit Tweet' ಅನ್ನು ಶೀಘ್ರ ನೀಡುವ ಸಾಧ್ಯತೆ ಇದ್ದು ಈ ಸಂಬಂಧ ಟ್ವಿಟರ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ನಿರತವಾಗಿದೆ.

ಹೌದು.. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆಯಾಗಿ ಸರ್ಕಾರಗಳಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ನಂತರ ಟ್ವಿಟರ್ ಇದೀಗ ಬಳಕೆದಾರರಿಗೆ ಟ್ವೀಟ್‌ಗಳನ್ನು ಎಡಿಟ್ ಮಾಡುವ ಅವಕಾಶವನ್ನು ನೀಡುತ್ತಿದೆ. ಈ ಸಂಬಂಧ ಈಗಾಗಲೇ ಟ್ವಿಟರ್ ಕಾರ್ಯಪ್ರವೃತ್ತವಾಗಿದ್ದು, 'Edit Tweet' ಆಯ್ಕೆಯ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದೆ. 

ಈ ಕುರಿತು ಸ್ವತಃ ಟ್ವಿಟರ್ ಸಂಸ್ಥೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ನೀವು ಎಡಿಟ್ ಮಾಡಿದ ಟ್ವೀಟ್ ಅ​​ನ್ನು ನೋಡಿದರೆ ಅದಕ್ಕೆ ನಾವು ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿರುವುದೇ ಇದಕ್ಕೆ ಕಾರಣ. ಪ್ರಕ್ರಿಯೆ ನಡೆಯುತ್ತಿದೆ, ಸರಿಯಾಗುತ್ತದೆ ಎಂದು ಟ್ವಿಟರ್ ಟ್ವೀಟ್ ಮಾಡಿದೆ. 

ಇದನ್ನೂ ಓದಿ: ಭಾರತದ ಟ್ವಿಟರ್ ಸ್ನೇಹಿತನನ್ನು ಭೇಟಿಯಾದ ಇಲಾನ್ ಮಸ್ಕ್!

ಇಲ್ಲಿಯವರೆಗೆ, ಒಮ್ಮೆ ಟ್ವೀಟ್ ಮಾಡಿದ ವಿಷಯವನ್ನು ಮತ್ತೆ ಎಡಿಟ್ ಮಾಡಲು ಸಾಧ್ಯವಿರಲಿಲ್ಲ. ಏನಾದರೂ ಬದಲಾವಣೆ ಇದ್ದರೆ ಅದನ್ನು ಮತ್ತೊಮ್ಮೆ ಟ್ವೀಟ್ ಮಾಡಬೇಕಾಗಿತ್ತು. ಆದರೆ ಇದೀಗ ಶೀಘ್ರದಲ್ಲೇ ಟ್ವಿಟರ್ ಎಡಿಟ್ ಆಯ್ಕೆಯನ್ನು ನೀಡುತ್ತಿದೆ.

ಇದು ಹೇಗೆ ಕೆಲಸ ಮಾಡುತ್ತದೆ?
ಮೂಲಗಳ ಪ್ರಕಾರ ಈ ಎಡಿಟ್ ಬಟನ್, ಟ್ವೀಟ್ ಪ್ರಕಟಿಸಿದ ನಂತರ 30 ನಿಮಿಷಗಳವರೆಗೆ ಅಸ್ತಿತ್ವದಲ್ಲಿರುವ ಟ್ವೀಟ್‌ಗಳಿಗೆ ಬದಲಾವಣೆಗಳನ್ನು ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಪ್ರಕಟಿತ ಟ್ವೀಟ್ ಲೇಬಲ್, ಟೈಮ್‌ಸ್ಟ್ಯಾಂಪ್ ಮತ್ತು ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುವ ಐಕಾನ್‌ಗಳಂತಹ ಗುರುತಿಸುವಿಕೆಗಳನ್ನು ಹೊಂದಿರುತ್ತದೆ. ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕ್ಲಿಕ್ ಮಾಡಲು ಮತ್ತು ಮೂಲ ವಿಷಯಕ್ಕೆ ಮಾಡಿದ ಎಲ್ಲಾ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಖಾತೆಗಳನ್ನು ಬ್ಲಾಕ್ ಮಾಡುತ್ತಾ ಹೋದರೆ ನಮ್ಮ ವ್ಯವಹಾರವನ್ನೇ ಮುಚ್ಚಬೇಕಾಗುತ್ತದೆ: ಟ್ವಿಟರ್

ಟ್ವಿಟರ್ 320 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ಜನಪ್ರಿಯ ವೇದಿಕೆಯಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸಿದ ನಂತರ ಅವುಗಳನ್ನು ಸಂಪಾದಿಸಲು ಅಥವಾ ಎಡಿಟ್ ಮಾಡಲು ಅನುಮತಿಸುವ ವೈಶಿಷ್ಟ್ಯವನ್ನು ಸೇರಿಸಲು ಅನೇಕರು ಒತ್ತಾಯಿಸಿದ್ದಾರೆ. ಬಳಕೆದಾರರಿಂದ ಪುನರಾವರ್ತಿತ ವಿನಂತಿಗಳ ಹೊರತಾಗಿಯೂ, ಟ್ವಿಟರ್ ಅದನ್ನು ಮಾಡಲು ನಿರಾಕರಿಸಿತ್ತು.

ಇದನ್ನೂ ಓದಿ: ಕಂಟೆಂಟ್ ನಿರ್ಬಂಧಿಸುವ ಕೇಂದ್ರದ "ನಿರಂಕುಶ" ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಟ್ವಿಟರ್

ಈ ಕುರಿತು 2020 ರಲ್ಲಿ ಸಂದರ್ಶನವೊಂದರಲ್ಲಿ, ಆಗಿನ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ಕಂಪನಿಯು ಬಹುಶಃ ಎಂದಿಗೂ ಟ್ವೀಟ್ ಎಡಿಟ್ ವೈಶಿಷ್ಟ್ಯವನ್ನು ಸೇರಿಸುವುದಿಲ್ಲ ಎಂದು ಹೇಳಿದ್ದರು. ಏಕೆಂದರೆ ಅದು ತಪ್ಪು ಮಾಹಿತಿಯ ಹರಡುವಿಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದರು. ಆದರೆ ಇತರರು ಹೇಳಿಕೆಗಳನ್ನು ಮರುಟ್ವೀಟ್ ಮಾಡಿದ ನಂತರ ಅಥವಾ ಅನುಮೋದಿಸಿದ ನಂತರ ಅದನ್ನು ಬದಲಾಯಿಸಲು “ಟ್ವಿಟ್  ಎಡಿಟ್” ಬಟನ್ ಅನ್ನು ಬಳಸಬಹುದು ಎಂದು ಕೆಲವು ಟೆಕ್ ತಜ್ಞರು ಎಚ್ಚರಿಸಿದ್ದರು.

ಯಾರು ಟ್ವೀಟ್ ಎಡಿಟ್ ಮಾಡಬಹುದು?
ಪ್ರಸ್ತುತ ಟ್ವೀಟ್ ಎಡಿಟ್ ಆಯ್ಕೆ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿದ್ದು, ಟ್ವಿಟರ್ ಮೂಲಗಳ ಪ್ರಕಾರ ಬ್ಲೂ ಟಿಕ್ ಬಟನ್ ಬಳಕೆದಾರರಿಗೆ ಮಾತ್ರ ಎಡಿಟ್ ಮಾಡುವ ಅವಕಾಶವಿದೆ ಎನ್ನಲಾಗಿದೆ. ಬ್ಲೂ ಬಟನ್ ಬಳಕೆದಾರರು ಟ್ವೀಟ್ ಮಾಡಿ Send ಬಟನ್ ಒತ್ತಿ 30 ಸೆಕೆಂಡ್​​ಗಳೊಳಗೆ ಅದನ್ನು ರದ್ದು ಮಾಡುವ ಅಥವಾ undo ಮಾಡುವ ವೈಶಿಷ್ಟ್ಯವನ್ನೂ ಹೊಂದಿರುತ್ತಾರೆ ಎನ್ನಲಾಗಿದೆ.