X Close
X

ಆರಂಭಿಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್


Hitman-Rohit-Sharma
Bengaluru:

ರಾಜ್‌ಕೋಟ್: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 7000 ರನ್ ಗಳಿಸಿದ ವಿಶ್ವದ ಮೊದಲನೇ ಬ್ಯಾಟ್ಸ್‌‌ಮನ್ ಎಂಬ ದಾಖಲೆ ಮಾಡಿದ್ದಾರೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಯೇಷನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ ಈ ಸಾಧನೆ ಮಾಡಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಹಾಶೀಮ್ ಆಮ್ಲಾ ಹಾಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಟ್‌ಮ್ಯಾನ್ ಹಿಂದಿಕ್ಕಿದರು.

7000 ರನ್ ಪೂರೈಸಲು ರೋಹಿತ್ ಶರ್ಮಾ ಅವರು 137 ಇನಿಂಗ್ಸ್‌ ಗಳನ್ನು ತೆಗೆದುಕೊಂಡಿದ್ದಾರೆ. 147 ಇನಿಂಗ್ಸ್‌ ಗಳಲ್ಲಿ ಈ ಸಾಧನೆ ಮಾಡಿರುವ ಹಾಶೀಮ್ ಆಮ್ಲಾ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (160 ಇನಿಂಗ್ಸ್‌) ಮೂರನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 7000 ರನ್ ಗಳಿಸಿದ ಭಾರತದ ನಾಲ್ಕನೇ ಆರಂಭಿಕ ಬ್ಯಾಟ್ಸ್‌‌ಮ್ಯಾನ್ ಎಂಬ ಹಿರಿಮೆಗೆ ರೋಹಿತ್ ಭಾಜನರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿರುವ ಇತರ ಆರಂಭಿಕರಾಗಿದ್ದಾರೆ.

ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ರೋಹಿತ್, ಇಂದಿನ ಪಂದ್ಯದಲ್ಲಿ 44 ಎಸೆತಗಳಲ್ಲಿ 42 ರನ್ ಗಳಿಸಿದರು. ಬಳಿಕ ಆ್ಯಡಂ ಝಂಪಾಗೆ ವಿಕೆಟ್ ಒಪ್ಪಿಸಿದರು.

ಭಾರತ ನಿಗದಿತ 50 ಓವರ್ ಗಳಿಗೆ 340 ರನ್ ಗಳಿಸಿದ್ದು, ಆಸ್ಟ್ರೇಲಿಯಾ ತಂಡಕ್ಕೆ 341 ರನ್ ಸವಾಲಿನ ಗುರಿ ನೀಡಿದೆ.