X Close
X

ಅವಳು ಮುಗ್ದೆ, ರೈತರ ಪರ ನಿಲ್ಲುವುದು ಕ್ರೈಂ ಅಲ್ಲ: ದಿಶಾ ರವಿ ಪರ ನಟಿ ರಮ್ಯಾ ಬ್ಯಾಟಿಂಗ್


ramyadisha

ಬೆಂಗಳೂರು: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವಾಗಿರುವುದುಅಕ್ಕೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. "ದಿಶಾ ರವಿ ಬೆಂಗಳೂರಿನ ಯುವತಿ, ಕನ್ನಡತಿ, ಆಕೆ ಮುಗ್ದೆ, ರೈತರ ಪರ ನಿಲ್ಲುವುದು ಕ್ರೈಂ ಅಲ್ಲ, ನಾವು ಅವಳ ಪರ ನಿಲ್ಲಬೇಕು" ಎಂದು ರಮ್ಯಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

"ದಿಶಾ ರವಿ 21 ವರ್ಷದ ಹವಾಮಾನ ಕಾರ್ಯಕರ್ತ ಇಂದು ಜೈಲಿನಲ್ಲಿದ್ದರೆ ಅದಕ್ಕೆ ನಾವೆಲ್ಲರೂ ಸಾಮೂಹಿಕವಾಗಿ ಜವಾಬ್ದಾರರು. ನಮ್ಮ ದೇಶದಲ್ಲಿ ಈ ಬಗೆಯ ಕೃತ್ಯಕ್ಕೆ ನಾವೆಲ್ಲ ಬಹಳ ಸಮಯದಿಂದ ಮೂಕ ಪ್ರೇಕ್ಷಕರಾಗಿದ್ದೇವೆ.ಈ ಬಗ್ಗೆ ನಾವು ಜವಾಬ್ದಾರಿಯುತ ನಾಗರಿಕರಾಗಿ ಕಡೆಯ ಬಾರಿಗೆ ಮಾತನಾಡಿದ್ದು ಯಾವಾಗ? ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ? ಈ ದೇಶವು ನಮ್ಮದು ಎಂದು ನಾವು ಮರೆತಿದ್ದೇವೆಯೇ?" ರಮ್ಯಾ ಪ್ರಶ್ನೆ ಮಾಡಿದ್ದಾರೆ.

ರಮ್ಯಾ ಅವರ ಫೇಸ್ ಬುಕ್ ಬರಹ ಈ ಕೆಳಗಿನಂತಿದೆ-


 

(KANNADA PRABHA)