ಬೆಂಗಳೂರು: ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಜಂಬೋಗೆ 51ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಬಿಸಿಸಿಐ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಪಡೆದಿರುವ ವಿಡಿಯೋ ತುಣಕೊಂದನ್ನು ಹಂಚಿಕೊಂಡು ಸ್ಮರಿಸಿದೆ.
1990ರಲ್ಲಿ ದೆಹಲಿಯಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳನ್ನು ಅನಿಲ್ ಕುಂಬ್ಳೆ ಕಬಳಿಸಿದ್ದರು.
ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅನಿಲ್ ಕುಂಬ್ಳೆ ಪಾತ್ರರಾಗಿದ್ದಾರೆ. ದೆಹಲಿಯ ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ನಡೆದ ಈ ದಾಖಲೆ ಹೊಸ ಇತಿಹಾಸ ಬರೆಯಿತು. ಬಿಸಿಸಿಐನ ಈ ಟ್ವೀಟ್ ಮೂಲಕ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಆ ಕ್ಷಣವನ್ನು ಕಣ್ತುಂಬಿಕೊಂಡರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ಬರ್ತ್ ಡೇಗೆ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಹುತ್ಪೂರ್ವಕ ಸಂದೇಶ ಕೋರಿದ್ದಾರೆ. ಹೆಸರಿನಿಂದಲೂ ಜಂಬೋ, ಖ್ಯಾತಿಯಿಂದಲೂ ಜಂಬೋ ಎಂದು ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
(KANNADA PRABHA)4⃣0⃣3⃣ intl. games
— BCCI (@BCCI) October 17, 2021
9⃣5⃣6⃣ intl. wickets
Only the second bowler in Test cricket to scalp 10 wickets in an innings
Wishing former #TeamIndia captain @anilkumble1074 a very happy birthday.
Let's revisit his brilliant 1⃣0⃣-wicket haul against Pakistan pic.twitter.com/BFrxNqKZsN