X Close
X

8 ತಿಂಗಳಿಂದ 'CoJa' ಸರ್ಕಾರಕ್ಕೆ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ: ಅನಂತ್ ಕುಮಾರ್ ಹೆಗಡೆ ಟ್ವೀಟ್!


ananthkumar-hegde
Bengaluru:ಮೈಸೂರು: 8 ತಿಂಗಳಾರದರೂ 'CoJa' ಸರ್ಕಾರಕ್ಕೆ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ವಿವಾದಾತ್ಮಕ ಟ್ವೀಟ್ ವೊಂದನ್ನು ಮಾಡಿದ್ದಾರೆ. 
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಅನಂತ್ ಕುಮಾರ್ ಹೆಗ್ಡೆ ಇದೀಗ ಕೇಂದ್ರ ಸರ್ಕಾರ ಬಜೆಟ್ ಸಂಬಂಧ ಟ್ವೀಟ್ ಮಾಡಿದ್ದಾರೆ. 
 ಬಜೆಟ್ ನಲ್ಲಿ ರೈತರಿಗೆ ಘೋಷಣೆ ಮಾಡಿದ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕೂಡಲೇ ಜಾರಿಯಾಗುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಸಂತಸದ ಸುದ್ದಿ. ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಕಬಳಿಸಿದ #CoJa ಸರ್ಕಾರಕ್ಕೆ 8 ತಿಂಗಳಾದರೂ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಟೀಕಿಸಿದ್ದಾರೆ.