X Close
X

65ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಕನ್ನಡ ಸಿನಿ ತಾರೆಯರು


kannadara

ಇಂದು ನಾಡಿನೆಲ್ಲೆಡೆ 65ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಕನ್ನಡ ಸಿನಿಮಾ ರಂಗದ ಖ್ಯಾತ ನಟ ನಟಿಯರು ಸಹ ಈ ದಿನ ಕನ್ನಡಿಗರಿಗೆ, ಕನ್ನಡಾಭಿಮಾನಿಗಳಿಗೆ ಕರ್ನಾಟಕ ರಾಜ್ಯೋತ್ಸವ ಶುಭಾಶಯ ಹೇಳಿದ್ದಾರೆ.

ಖ್ಯಾತ ನಟ, ನಟಿಯರಾದ ಜಗ್ಗೇಶ್, ಧ್ರುವ ಸರ್ಜಾ, ಕಿಚ್ಚ ಸುದೀಪ್, ಸಂಸದೆ ಸುಮಲತಾ ಅಂಬರೀಶ್ ಸೇರಿ ಅನೇಕರು ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಗಳ ಮೂಲಕ ಕರ್ನಾಟಕ ರಾಜ್ಯೋತ್ಸವ ಶುಭಾಶಯ ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಕೋರಿರುವ ನವರಸ ನಾಯಕ ಜಗ್ಗೇಶ್ ತಮ್ಮ ಅಭಿಮಾನಿ ಬಳಗ ಹಂಚಿಕೊಂಡ ಕನ್ನಡ ಹಾಡೊಂದನ್ನು ಹಾಕಿಕೊಂಡಿದ್ದು ನಿಸ್ವಾರ್ಥದಿಂದ ಕನ್ನಡವನ್ನ ಆರಾಧಿಸುತ್ತಿದ್ದ ಕಾಲ! "ಇಂದು ಮೌನವೆ ಆಭರಣ ಮುಗುಳು ನಗೆ ಶಶಿಕಿರಣ" ಧನ್ಯವಾದ" ಎಂದಿದ್ದಾರೆ.

 

 

 

 

ಪವರ್ ಸ್ತಾರ್ ಪುನೀತ್ ರಾಜ್ ಕುಮಾರ್ "ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಡಾ. ರಾಜ್ ಕುಮಾರ್ ಹಾಡೊಂದನ್ನು ನೆನಪಿಸಿಕೊಂಡಿದ್ದಾರೆ.

ಇನ್ನು ರಾಘವೇಂದ್ರ ರಾಜ್ ಕುಮಾರ್ ಸಹ ಶುಭೋದಯ | Good morning.ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.ಆ ತಾಯಿ ಭುವನೇಶ್ವರಿ ತಮ್ಮೆಲ್ಲರಿಗೂ ಸದಾಕಾಲ ಮಂಗಳವನ್ನು ತರಲಿ. #ಕನ್ನಡರಾಜ್ಯೋತ್ಸವ ಎಂದು ಬರೆದುಕೊಂಡಿದ್ದಾರೆ.

 

 

ಕಿಚ್ಚ ಸುದೀಪ್ ಟ್ವೀಟ್ ಮಾಡಿ "ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ "ಕನ್ನಡ", ಹಾರುತಲಿರಲಿ ನಮ್ಮ ತಾಯ್ನಾಡಿನ ಸಂಸ್ಕೃತಿಯ ಬಣ್ಣಗಳ ಪತಾಕೆ, ಝೇಂಕರಿಸಲಿ ಕರುನಾಡಿನ ಘೋಷ ವಾಕ್ಯ,, ಹರಡಲಿ ಎಲ್ಲೆಡೆ ಕನ್ನಡದ ಕಂಪು., ಕನ್ನಡಾಂಬೆಯ ಸಮಸ್ತ ಕುಲಕೋಟಿಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು.," ಎಂದು ಹಾರೈಸಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಇತ್ತೀಚೆಗೆ ತಾವು ಸಂಸತ್ತಿನಲ್ಲಿ ಮಾಡಿದ್ದ ಭಾಷಣದ ತುಣುಕು ವಿಡಿಯೋವನ್ನು ಹಂಚಿಕೊಂಡಿದ್ದಲ್ಲದೆ "ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು, ಕನ್ನಡಕ್ಕಾಗಿ ದನಿ ಎತ್ತು ಅಲ್ಲಿ ಪಾಂಚಜನ್ಯ ಮೊಳಗುವುದು." ನಮ್ಮ ನಾಡು ನುಡಿಗಳ ರಕ್ಷಣೆಗಾಗಿ ಸದಾ ಸಿದ್ಧರಿರೋಣ" ಎಂದಿದ್ದಾರೆ.

ಇನ್ನು ನಟ ಧ್ರುವ ಸರ್ಜಾ "ಪೊಗರು" ಚಿತ್ರದ ವಿಶೇಷ ಪೋಸ್ಟರ್ ಜತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ ಕೋರಿದ್ದಾರೆ.
 

 

(KANNADA PRABHA)