X Close
X

150 ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಟೀಂಇಂಡಿಯಾ ಮಾಜಿ ಆಟಗಾರ


raghurambhatt

ಬೆಂಗಳೂರು: ಟೀಂ ಇಂಡಿಯಾ ಮಾಜಿ ಆಟಗಾರ ರಘುರಾಮ್ ಭಟ್ ನಗರದ ಸಂಜಯ್ ನಗರದಲ್ಲಿ ಸೋಮವಾರ ದೀನರಿಗೆ ಆಹಾರಾ ವಿತರಿಸಿ ಅಕ್ಷರಶಃಅ ಕಣ್ಣೀರುಗೆರೆದಿದ್ದಾರೆ.  ತರಕಾರಿಗಳು, ಉಪ್ಪು, ಸಕ್ಕರೆ, ಅಕ್ಕಿ ಮತ್ತು ಬೆಳೆ ಸೇರಿದಂತೆ ಇತರ ಅಗತ್ಯ ಆಹಾರ ಉತ್ಪನ್ನಗಳನ್ನು ಹಸ್ತಾಂತರಿಸಿದಾಗ ಜನರು ಅವರ ಕಾಲುಗಳಿಗೆ ಎರಗಿದುದನ್ನು ನೋಡಿದ ಭಟ್ ಅವರ ಮನಸ್ಸು ಕರಗಿತ್ತು. ಕ್ರಿಕೆಟಿಗ ಭಟ್ ಮಂಗಳವಾರ ಈ ಪ್ರದೇಶದ ಸುಮಾರು 150 ಕುಟುಂಬಗಳಿಗೆ ಪಡಿತರ ಹಾಗೂ ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡಿದ್ದಾರೆ.

 ಎರಡು ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಭಟ್ ಅಗತ್ಯವಿರುವ ಸಮಯದಲ್ಲಿ ಈ ಜನರಿಗೆ ಸಹಾಯ ಮಾಡಲು ಸಂತೋಷವಾಗುತ್ತಿದೆ ಎಂದಿದ್ದಾರೆ. ಅವರ ವೃತ್ತಿಜೀವನದ ದಿನಗಳೊಂದಿಗೆ ಹೋಲಿಕೆ ಮಾಡಿದ ಭಟ್ “ನನಗೆ ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಂಬದೇ ಇರಬಹುದು, ಆದರೆ ಬಡವರಿಗೆ ಸಹಾಯ ಮಾಡುವುದರಿಂದ ನಾನು ಭಾರತಕ್ಕಾ ಆಟವಾಡಿದ್ದಾಗ  ಅನುಭವಿಸಿದ್ದಕ್ಕಿಂತ ಹೆಚ್ಚು ಸಂತೋಷ  ಅನುಭವಿಸಿದೆ. ಸಣ್ಣ ಗುಡಿಸಲುಗಳಲ್ಲಿ ವಾಸಿಸುವ ಆಹಾರ ಮತ್ತು ಹಣವಿಲ್ಲದ ಬಡವರಿಗೆ ಸಹಾಯ ಮಾಡುವ ಸಮಯವಿದು. ಕೆಲವರಿಗಂತೂ ದಿನಕ್ಕೆ ಒಪ್ಪೊತ್ತಿನ ಊಟ ಪಡೆಯುವುದು ಸಹ ಕಷ್ಟಕರವಾಗುತ್ತಿದೆ. ಅಂತಹ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದ ತನ್ನ ಆಪ್ತ ಸ್ನೇಹಿತ ಚಂದ್ರು ನನಗೆ ಪ್ರೇರಣೆಯಾಗಿದ್ದಾರೆ.

"ನಾನು ಸಹ ಬಡವರಿಗೆ ಆಹಾರ ಪೂರೈಸಲು ನಿರ್ಧರಿಸಿದೆ. ಸ್ಪಷ್ಟ ಯೋಜನೆ ಹಾಕಿಕೊಂಡು ನಿಜವಾದ ಅಗತ್ಯವಿರುವವರ್ಗೆ ಆಹಾರ ತಲುಪಬೇಕು.ಹಾಗಾಗಿ ಸ್ನೇಹಿತನ ನೆರವಿನಿಂದ ಈ ಪ್ರದೇಶದ  ಕುಟುಂಬಗಳ ಬಗ್ಗೆ ಅದ್ಯಯನ ನಡೆಸಿದೆ. ಯಾರು ಆಹಾರಕ್ಕಾಗಿ ಹಪಹಪಿಸುತ್ತಿದ್ದರು ಎನ್ನುವುದನ್ನು ಅರ್ಥೈಸಿಕೊಂಡ ನಂತರ ವರಿಗೆ ಟೋಕನ್‌ಗಳನ್ನು ಹಸ್ತಾಂತರಿಸಲಾಯಿತು, ಅದನ್ನು ಪಡಿತರವನ್ನು ಸಂಗ್ರಹಿಸಲು ಸೋಮವಾರ ಗೊತ್ತುಪಡಿಸಿದ ಪ್ರದೇಶಕ್ಕೆ ತರಲಾಗಿತ್ತು. 

“ಈ ಪಡಿತರವನ್ನು ಇಷ್ಟಬಂದವರಿಗೆ ವಿತರಿಸಲಾಗಿಲ್ಲ. ಬದಲಿಗೆ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಅಗತ್ಯವಿರುವವಾರದ ಹಿಂದೆ ಅಂತಹಾ ಅಗತ್ಯವಿರುವ ಜನರನ್ನು ಗುರುತಿಸಿ ಅವರಿಗೆ ಟೋಕನ್ ಹಂಚಲಾಗಿದೆ.  ಅಂತಹ ಉಚಿತ ಆಹಾರವನ್ನು ವಿತರಿಸಿದಾಗ ನಾನು ಗಮನಿಸಿದಂತೆ ಈ ಟೋಕನ್‌ಗಳು ಮುಖ್ಯವಾಗಿದ್ದವು, ಅವುಗಳನ್ನು ಆಹಾರ ಖರೀದಿಸಲು ಶಕ್ತರಾದ ಜನರು ಸಹ ಸರದಿಯಲ್ಲಿ ನಿಂತು ಇವುಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ ಆದರೆ ನಾನು ಅದನ್ನು ತಪ್ಪಿಸಿದೆ"

ಒಂದೊಮ್ಮೆ ಕೋವಿಡ್ ಇರದಿದ್ದಲ್ಲಿ ಭಟ್  ಕೆಎಸ್ಸಿಎ ನ  ಮುಖ್ಯ ಆಯ್ಕೆಗಾರ ಕೆಲಸದಲ್ಲಿ ನಿರತವಾಗಿರುತ್ತಿದ್ದರು.ಅವರು ಕರ್ನಾಟಕದ ವಿಶೇಷ ಪ್ರತಿಭೆಗಳ ಮೇಲೆ ಕಣ್ಣಿಟ್ಟಿರುತ್ತಾರೆ ಮತ್ತು ಅವರ ಬಗ್ಗೆ ಒಂದು  ನೋಟ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಇಂದು ಕ್ರಿಕೆಟ್ ಅವರನ್ನು ಅಷ್ತಾಗಿ ಗಮನ ಸೆಳೆಯುತ್ತಿಲ್ಲ  “ನಾವು ಬೇರೆ ಪರಿಸ್ಥಿತಿಯಲ್ಲಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಕ್ರೀಡೆ ಈಗ್ ಹಿಂದೆ ಸರಿದಿದೆ.ಸಾಂಕ್ರಾಮಿಕ ರೋಗ ಗುಣವಾದ ನಂತರ ರ, ನಾವು ಮತ್ತೆ ಕ್ರಿಕೆಟ್ ಮತ್ತು ಕ್ರೀಡೆಯತ್ತ  ಗಮನಿಸುತ್ತೇವೆ. ಆದರೆ ಕ್ರಿಕೆಟ್ ಗೆ ಗಮನಿಸುವಾಗಲೂ ಸಹ ನಾವು ಬಡವರಿಗೆ ಸಹಾಯ ಮಾಡುವ ಗ್ಣ ಉಳಿಸಿಕೊಳ್ಳಬೇಕು" ಭಟ್ ಹೇಳಿದ್ದಾರೆ.

(KANNADA PRABHA) (KANNADA PRABHA)