X Close
X

ಹಿರಿಯ ನಾಯಕರಿಂದ ನಿರ್ಲಕ್ಷ್ಯ: ಹೊಸ ಸಚಿವರಿಂದ ಬಿಜೆಪಿ ಕಾರ್ಯಕರ್ತರಿಗೆ ಇಮ್ಮಡಿ ಉತ್ಸಾಹ


bjp-new
Bengaluru:

ಬೆಂಗಳೂರು: ಬಿಜೆಪಿಯ ಕೆಲ ಹಿರಿಯ ನಾಯಕರು ಕಾರ್ಯಕರ್ತರ ಜೊತೆ ಸಾಮಾಜಿಕ ಅಂತರ ಕಾಯ್ಡುಕೊಳ್ಳುತ್ತಿದ್ದಾರೆ, ಆದರೆ ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಸಚಿವರು ನಿಷ್ಠಾವಂತ ಕಾರ್ಯಕರ್ತರಿಗೆ ಆದರದ ಸ್ವಾಗತ ನೀಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಬಂದಿರುವ ಹೊಸ ಸಚಿವರು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುತ್ತಿದ್ದಾರೆ.

ಪಕ್ಷದ ಸಲಹಾ ಮಂಡಳಿ ಮತ್ತು ಕಾರ್ಯದರ್ಶಿಗಳ ಹುದ್ದೆಗೆ ಕಾರ್ಯಕರ್ತರನ್ನು ನೇಮಕ ಮಾಡದ ಕಾರಣ ಕಾರ್ಯಕರ್ತರು ಹಿರಿಯ ಬಿಜೆಪಿ ಸಚಿವರಾದ ಬಸವರಾಜ ಬೊಮ್ಮಾಯಿ, ಅಶ್ವತ್ಥ  ನಾರಾಯಣ ಮತ್ತು ಸುರೇಶ್ ಕುಮಾರ್ ಅವರ ವಿರುದ್ಧ ಅಸಮಾಧಾನ ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವಂತ ಪಕ್ಷದ ಮುಖಂಡರಿಂದನಿರ್ಲಕ್ಷ್ಯಿಸಲ್ಪಟ್ಟ ಕಾರ್ಯಕರ್ತರನ್ನು ಬೇರೆ ಬೇರೆ ಪಕ್ಷಗಳಿಂದ ಬಂದಿರುವ ನಾಯಕರು ಪ್ರೀತಿ ಆದರ ತೋರುತ್ತಿದ್ದಾರೆ.  ಕುಂದು ಕೊರತೆ ಗಳನ್ನು ಆಲಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಾ.ಕೆ ಸುಧಾಕರ್, ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಮತ್ತು ಬೈರತಿ ಬಸವರಾಜ್ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಉತ್ಸಾಹ ತುಂಬುತ್ತಿದ್ದಾರೆ. ನಾವು ಬಿಜೆಪಿಯ ಒಂದು ಭಾಗವಾಗಿದ್ದೇವೆ,  ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ ಎಂದು ಬೈರತಿ ಬಸವರಾಜ್ ಹೇಳಿದ್ದಾರೆ.