X Close
X

ಹಾಸನಕ್ಕೆ ಮುಂಬೈ ಕಂಟಕ: ಕ್ವಾರಂಟೈನ್‌ನಲ್ಲಿದ್ದ 5 ಮಂದಿಗೆ ಕೊರೋನಾ ಸೋಂಕು ದೃಢ: ಜಿಲ್ಲಾಧಿಕಾರಿ


Corona-Kar

ಹಾಸನ: ಹಾಸನ ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಅಲ್ಲಿ ಇದ್ದ 5 ಜನರಿಗೆ ಕೊವೀಡ್-19 ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಸೋಂಕಿತ ಐವರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದು, ಮುಂಬೈನಿಂದ ಮೇ 10 ರಂದು ಜಿಲ್ಲೆಗೆ ಬಂದಿದ್ದಾರೆ. 

ದಂಪತಿ ಹಾಗೂ ಇಬ್ಬರು ಮಕ್ಕಳು ಕೊರೋನಾ ಸೋಂಕಿತರಾಗಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 904ಕ್ಕೇರಿಕೆಯಾಗಿದೆ. ಒಟ್ಟು 32 ಜನರು ಮೃತಪಟ್ಟಿದ್ದು, 426 ಜನರು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.

(KANNADA PRABHA)