ಹಾಕಿ ವಿಶ್ವಕಪ್: ಕೆನಡಾವನ್ನು ಮಣಿಸಿದ ಭಾರತ ಕ್ವಾರ್ಟರ್ ಫೈನಲ್ಸ್ ಗೆ
Bengaluru:ಭುವನೇಶ್ವರ್: ಭುವನೇಶ್ವರದಲ್ಲಿ ಡಿ.08 ರಂದು ನಡೆದ ಹಾಕಿ ವಿಶ್ವಕಪ್ ನಲ್ಲಿ ಕೆನಡಾವನ್ನು ಮಣಿಸಿದ ಭಾರತ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.
5-1 ಗೋಲ್ ಗಳ ಅಂತರದಿಂದ ಭಾರತ ಕೆನಡಾ ತಂಡವನ್ನು ಮಣಿಸಿದ್ದು, ವಿಶ್ವದ ನಂ.-5 ನೇ ತಂಡವಾಗಿರುವ ಭಾರತ ಕೆನಡಾ ವಿರುದ್ಧದ ಗೆಲುವಿನ ಮೂಲಕ ವಿಶ್ವಕಪ್ ನಲ್ಲಿ ಸತತ 3 ನೇ ಗೆಲುವನ್ನು ದಾಖಲಿಸಿದ್ದು ಬೆಲಿಜಿಯಂ, ದಕ್ಷಿಣ ಆಫ್ರಿಕಾ ತಂಡಗಳನ್ನು ಅನುಕ್ರಮವಾಗಿ 2-2, 5-0 ಗೋಲ್ ಗಳ ಅಂತರದಿಂದ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆದಿದೆ.
ಚಿಂಗ್ಲೆನ್ಸನಾ ಸಿಂಗ್ 46 ನೇ ನಿಮಿಷದಲ್ಲಿ ಗೋಲ್ ನ್ನು ದಾಖಲಿಸಿದರೆ, ಲಲಿತ್ ಉಪಾಧ್ಯಾಯ್ 47 ಹಾಗೂ 57 ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು, ಅಮಿತ್ ರೋಹಿದಾಸ್ 51 ನೇ ನಿಮಿಷದಲ್ಲಿ ಗೋಲ್ ದಾಖಲಿಸಿದ್ದರು. ಹರ್ಮನ್ಪ್ರೀತ್ ಸಿಂಗ್ 12 ನೇ ನಿಮಿಷದಲ್ಲಿ ಗೋಲ್ ದಾಖಲಿಸಿದ್ದರು. ಕೆನಡಾದ ವಿರುದ್ಧ ಗೆದ್ದಿರುವ ಭಾರತ ಡಿ.13 ರಂದು ಕ್ವಾರ್ಟರ್ ಫೈನಲ್ಸ್ ಪಂದ್ಯವನ್ನಾಡಲಿದೆ.