X Close
X

ಸಂಸದ ಪ್ರತಾಪ್ ಸಿಂಹ ಕಚೇರಿಯತ್ತ ಕತ್ತೆ- ಹಂದಿಗಳ ಜೊತೆ ಮೆರವಣಿಗೆ ಹೊರಟ ಕಾಂಗ್ರೆಸ್ ಮುಖಂಡರಿಗೆ ಪೊಲೀಸರ ತಡೆ!


simha-new

ಮೈಸೂರು: ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್, ವಾದ, ವಾಗ್ವದ ಮುಂದುವರೆದಿದ್ದು ಈ ಮಧ್ಯೆ ಬಹಿರಂಗ ಚರ್ಚೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದಿನಾಂಕ ನಿಗದಿ ಮಾಡಿದ್ದರು.

ಅಂತೆಯೇ ಕಾಂಗ್ರೆಸ್ ಕಚೇರಿ ಆವರಣದಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೆ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕತ್ತೆ ಜೊತೆ ಮೆರವಣಿಗೆ ಹೊರಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನ ದಾಸಪ್ಪ ವೃತ್ತದಲ್ಲಿ ಪೊಲೀಸರು ತಡೆದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಕಾಂಗ್ರೆಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ವಶಕ್ಕೆ ಪಡೆದಿದ್ದ ಎಂ ಲಕ್ಷ್ಮಣ್ ರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಪೊಲೀಸರ ವಶದಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಎಂ.ಲಕ್ಷ್ಮಣ್ ಅವರು ಸಂಸದ ಪ್ರತಾಪ್ ಸಿಂಹಗೆ ವೀಡಿಯೋ ಕಾಲ್ ಮಾಡಿದ್ದು, ಆದರೆ ವಿಡಿಯೋ ಕಾಲ್ ಅನ್ನ ಪ್ರತಾಪ್ ಸಿಂಹ ಸ್ವೀಕರಿಸಿಲ್ಲ ಎನ್ನಲಾಗಿದೆ.

ಇದು ನಾಲ್ಕನೇ ಬಾರಿಗೆ ಸಂಸದರಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದರೂ ನಮ್ಮನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ. ಅವರು ಯಾವಾಗಲೂ ಹಿಟ್ ಅಂಡ್ ರನ್ ಹೇಳಿಕೆಗಳನ್ನು ನೀಡಿ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಾರೆ. ನಾನು ದಾಖಲೆಗಳೊಂದಿಗೆ ಬಂದಿದ್ದೇನೆ, ಆದರೆ ಸಂಸದರು ನಮ್ಮನ್ನು ಎದುರಿಸಲು ನಿರಂತರವಾಗಿ ವಿಫಲರಾಗಿದ್ದಾರೆ” ಎಂದು ಅವರು ಹೇಳಿದರು.

ಹಂದಿ ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾಗಿದೆ. ಕತ್ತೆಯನ್ನು ವೃತ್ತಿಪರ ಕೆಲಸಕ್ಕಾಗಿ ಬಳಸಲಾಗುತ್ತದೆ, ಇದು 'ಮಡಿವಾಳ' ಸಮುದಾಯವನ್ನು ಪ್ರತಿನಿಧಿಸುತ್ತದೆ. ಪ್ರತಾಪ್ ಸಿಂಹ ಅವರ ಹೇಳಿಕೆಗಳು ಈ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅವರು ಆರೋಪಿಸಿದರು.

(KANNADA PRABHA)