X Close
X

ಶ್ರೀನಗರ ಎನ್ ಕೌಂಟರ್ : ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಕೆಲ ಭದ್ರತಾ ಸಿಬ್ಬಂದಿಗೆ ಗಾಯ


Terror
Bengaluru:ಶ್ರೀನಗರ:  ಶ್ರೀನಗರ ಹೊರವಲಯ ಮುಜಗುಂದ್ ಪ್ರದೇಶದಲ್ಲಿ  ನಡೆದ ಗುಂಡಿನ ಕಾಳಗದಲ್ಲಿ  ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.  ಕಾರ್ಯಾಚರಣೆ ವೇಳೆಯಲ್ಲಿ ಅನೇಕ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಮುಜಗುಂದ್ ಪ್ರದೇಶದಲ್ಲಿ ಉಗ್ರರು ಅಡಗಿರುವ  ಬಗ್ಗೆ ತಿಳಿದುಬಂದ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ತಂಡದಿದ ಜಂಟಿ ಕಾರ್ಯಾಚರಣೆ ನಡೆಸಲಾಯಿತು.ಎಲ್ಲಾ ಮಾರ್ಗಗಳನ್ನು ಮುಚ್ಚಿ, ಮನೆ ಮನೆ ಹುಡುಕುವ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಆದಾಗ್ಯೂ, ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ತೆರಳುತ್ತಿರುವಾಗ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ.

ಗುಂಡಿನ ಕಾಳಗ ವೇಳೆಯಲ್ಲಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ . ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಮೃತ ಉಗ್ರರ ಶವಗಳನ್ನು ವಶಕ್ಕೆ ಪಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಉಗ್ರರು ಅಡಗಿ ಕುಳಿತಿದ್ದ ಮನೆ ಸ್ಟೋಟಗೊಂಡಿರುವುದಾಗಿ  ಸ್ಥಳೀಯರು ಹೇಳಿದ್ದಾರೆ.