X Close
X

ವಿಶಾಖಪಟ್ಟಣಕ್ಕೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿ ಸಾವು!


Crime-accident-deaath

ಬೆಂಗಳೂರು: ಆಂಧ್ರಪ್ರದೇಸದ ವಿಶಾಖಪಟ್ಟಣಕ್ಕೆ ತೆರಳುವ ಸಲುವಾಗಿ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಅರೆಪಲ್ಲಿ ಮಾರುತಿ ಗಣೇಶ್ (20) ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದಾರೆ. ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ತೆರಳುವ ಸಲುವಾಗಿ ನಿನ್ನೆ ಸಂಜೆ ಗಣೇಶ್ ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. 

ಸಂಜೆ 5 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಪ್ರವೇಶ ದ್ವಾರ ಸಂಖ್ಯೆ 3ರಲ್ಲಿರುವ ಶೌಚಾಲಯಕ್ಕೆ ತೆರಳಿದ್ದು, ಶೌಚಾಲಯದಲ್ಲಿಯೇ ಕುಸಿದು ಬಿದ್ದಿದ್ದಾರೆಂದು ಹೇಳಲಾಗುತ್ತಿದೆ. 

ಸಂಜೆ 6.55ಕ್ಕೆ ಹೊರಡಲಿರುವ ಏರ್ ಏಷಿಯಾ ವಿಮಾನ 15 1458ದಲ್ಲಿ ಗಣೇಶ್ ಅವರು ತೆರಳಬೇಕಿತ್ತು. ಎಲ್ಲಾ ಭದ್ರತಾಯ ಪರಿಶೀಲನೆ ಬಳಿಕ ಪ್ರಯಾಣಿಕರು ವಿಮಾನದಲ್ಲಿ ಕುಳಿತುಕೊಂಡಿದ್ದರು. ಆದರೆ, ಗಣೇಶ್ ಅವರು ವಿಮಾನ ಹತ್ತಿರಲಿಲ್ಲ. 

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದ ಸಿಬ್ಬಂದಿಗಳು ಆ್ಯಂಬುಲೆನ್ಸ್ ಕರೆಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. 

ಈ ನಡುವೆ ಸ್ಥಳೀಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಾವಿಗೆ ಇನ್ನೂ ನಿಖರ ಕಾರಣಗಳು ತಿಳಿದುಬಂದಿಲ್ಲ. ಈ ನಡುವೆ ಕೊರೋನಾ ಸೋಂಕಿತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ, ಫಲಿತಾಂಶ ಎರಡು ದಿನಗಳ ಬಳಿಕವಷ್ಟೇ ತಿಳಿದುಬರಲಿದೆ ಎಂದಿದ್ದಾರೆ. 

(KANNADA PRABHA)