X Close
X

ಲಾಕ್ ಡೌನ್ 4.0 ಘೋಷಣೆ ಬೆನ್ನಲ್ಲೇ ಬೆಂಗಳೂರು ಕಂಟೈನ್ ಮೆಂಟ್ ಝೋನ್ ಪಟ್ಟಿ ಪರಿಷ್ಕರಿಸಿದ ಬಿಬಿಎಂಪಿ


CB-Pura-sealdown

ಬೆಂಗಳೂರು: ಮಾರಕ ಕೊರೋನಾ ವೈರಸ್ ಪ್ರಸರಣ ನಿರ್ಬಂಧಕ್ಕಾಗಿ ಕೇಂದ್ರ ಸರ್ಕಾರ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಿತ್ತು, ಲಾಕ್ ಡೌನ್ 4.0 ವಿಸ್ತರಣೆ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿನ ಕಂಟೈನ್ ಮೆಂಟ್ ಝೋನ್ ಗಳನ್ನು ಪುನರ್  ಪರಿಷ್ಕರಿಸಿದೆ.

ದೇಶಾದ್ಯಂತ ಇಂದಿನಿಂದ ಲಾಕ್ ಡೌನ್ 4.0 ಆರಂಭಗೊಂಡಿದೆ. ರೆಡ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ, ಇತರೆ ಪ್ರದೇದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ ಕೂಡ ಗಣನೀಯವಾಗಿ  ಕಡಿಮೆಗೊಂಡಿದ್ದು, ಈ ಹಿಂದೆ 23ರಷ್ಟಿದ್ದ ಕಂಟೈನ್ ಮೆಂಟ್ ಝೋನ್ ಗಳನ್ನು ಬಿಬಿಎಂಪಿ ಇದೀಗ ಕೇವಲ 17ಕ್ಕೆ ಇಳಿಕೆ ಮಾಡಿದೆ.  

ಬಿಬಿಎಂಪಿ ಬಿಡುಗಡೆ ಮಾಡಿರುವ ಕಂಟೈನ್ ಮೆಂಟ್ ಝೋನ್ ಪಟ್ಟಿ ವಿವರ ಇಂತಿದೆ.
ಬೊಮ್ಮನ ಹಳ್ಳಿ

ವಾರ್ಡ್ ನಂಬರ್ 188 ಬಿಳೇಕಹಳ್ಳಿ ಮತ್ತು ವಾರ್ಡ್ ನಂಬರ್ 189 ಹೊಂಗಸಂದ್ರ, ವಾರ್ಡ್ ನಂಬರ್ 190 ಮಂಗಮ್ಮನ ಪಾಳ್ಯ ಮತ್ತು ವಾರ್ಡ್ ನಂಬರ್ 192 ಬೇಗೂರು

ಮಹದೇವಪುರ
ವಾರ್ಡ್ ನಂಬರ್ 84 ಹಗದೂರು

ಬೆಂಗಳೂರು ಪೂರ್ವವಲಯ
ವಂಸತನಗರ (ವಾರ್ಡ್ ನಂಬರ್ 93), ಶಿವಾಜಿನಗರ (ವಾರ್ಡ್ ನಂಬರ್ 92) ಹೆಚ್ ಬಿಆರ್ ಲೇಔಟ್ (ವಾರ್ಡ್ ನಂಬರ್ 24)

ಬೆಂಗಳೂರು ದಕ್ಷಿಣ ವಲಯ
ಹಂಪಿನಗರ  (ವಾರ್ಡ್ ನಂಬರ್ 133), ದೀಪಾಂಜಲಿ ನಗರ (ವಾರ್ಡ್ ನಂಬರ್ 158), ಬೈರಸಂದ್ರ (ವಾರ್ಡ್ ನಂಬರ್ 169), ಬಿಟಿಎಂಲೇಔಟ್ (ವಾರ್ಡ್ ನಂಬರ್ 176)

ಬೆಂಗಳೂರು ಪಶ್ಚಿಮ ವಲಯ
ಪಾದರಾಯನಪುರ (ವಾರ್ಡ್ ನಂಬರ್ 135), ಕೆಆರ್ ಮಾರುಕಟ್ಟೆ (ವಾರ್ಡ್ ನಂಬರ್ 139), ಮಲ್ಲೇಶ್ವರಂ (ವಾರ್ಡ್ ನಂಬರ್ 45)

ರಾಜರಾಜೇಶ್ವರಿ ನಗರ
ವಾರ್ಡ್ ನಂಬರ್ 72 ಹೇರೋಹಳ್ಳಿ ಮತ್ತು ಯಶವಂತಪುರ ವಾರ್ಡ್ ನಂಬರ್ 37

(KANNADA PRABHA)