X Close
X

ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಾಗದು: ಸುಬ್ರಮಣ್ಯನ್‍ ಸ್ವಾಮಿ


BSY-Swamy
Bengaluru:

ಬೆಂಗಳೂರು: ಯಡಿಯೂರಪ್ಪ ಇಲ್ಲದೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣ್ಯನ್‍ ಸ್ವಾಮಿ ಹೇಳಿದ್ದಾರೆ.

'ಕರ್ನಾಟಕದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಯಡಿಯೂರಪ್ಪ ಅಧಿಕಾರಕ್ಕೆ ತಂದಿದ್ದಾರೆ. ಯಡಿಯೂರಪ್ಪ ನೇರ ವ್ಯಕ್ತಿತ್ವದ್ದವರಾದ್ದರಿಂದ ಅವರನ್ನು ಅಧಿಕಾರದಿಂದ ಇಳಿಸುವ ಪಿತೂರಿಯನ್ನು ಕೆಲವರು ನಡೆಸಿದ್ದಾರೆ' ಎಂದು ಸುಬ್ರಮಣ್ಯನ್‍ ಸ್ವಾಮಿ ಟ್ವೀಟ್ ಮಾಡಿ ಪೋಸ್ಟ್ ಮಾಡಿದ್ದಾರೆ.

'ಯಡಿಯೂರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಮತ್ತೆ ಬರುವುದಿಲ್ಲ. ಅವರು ಮರಳಿ ಬಿಜೆಪಿಗೆ ವಾಪಸ್ಸಾಗಿದ್ದಕ್ಕೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ ಮತ್ತೆ ಅಂತಹ ತಪ್ಪು ಏಕೆ ಮಾಡಬೇಕು?' ಎಂದು ಸುಬ್ರಮಣ್ಯನ್ ಸ್ವಾಮಿ ಪ್ರಶ್ನಿಸಿದ್ದಾರೆ.