X Close
X

ಮುಂದುವರೆದ ಅಂತರ್ ರಾಜ್ಯ ಸಂಚಾರ: ರಾಜ್ಯದಲ್ಲಿ 7 ದಿನದಿಂದ ಶತಕ ಬಾರಿಸುತ್ತಿದೆ ಕೊರೋನಾ


ayush-hospital

ಬೆಂಗಳೂರು: ಅಂತರ್ ರಾಜ್ಯ ಸಂಚಾರ ಸೇವೆ ಮುಂದುವರೆದಿರುವ ನಡುವಲ್ಲೇ ಕಳೆದ 7 ದಿನಗಳಿಂದ ರಾಜ್ಯದಲ್ಲಿ ಹೆಮ್ಮಾರಿ ಕೊರೋನಾ ವೈರಸ್ ಶತಕ ಬಾರಿಸುತ್ತಲೇ ಇದೆ. ಮಂಗಳವಾರ ಒಂದೇ ದಿನ ಒಟ್ಟು 101 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಆಂತಕ ಹೆಚ್ಚಾಗುವಂತೆ ಮಾಡಿದೆ. 

ನಿನ್ನೆ ಪತ್ತೆಯಾದ 101 ಮಂದಿ ಸೋಂಕು ಪೈಕಿ 81 ಜನರು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆಯಾಗಿದೆ. 

ಹೊಸ 101 ಪ್ರಕರಣಗಳಲ್ಲಿ ಚಿತ್ರದುರ್ಗದಲ್ಲಿ 20, ಯಾದಗಿರಿ 14, ಹಾಸನ, ಬೆಳಗಾವಿ 13, ದಾವಣಗೆರೆ 11, ಬೀದರ್ 10, ವಿಜಯಪುರ 6, ಉಡುಪಿ, ದಕ್ಷಿಣ ಕನ್ನಡ 3, ಬೆಂಗಳೂರು ನಗರ, ಕೌಲಾರ 2, ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಯಚೂರು, ಬಳ್ಳಾರಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 15 ವರ್ಷದೊಳಗಿನ 11 ಮಕ್ಕಳು ಸೋಂಕಿತರಾಗಿದ್ದಾರೆ. 

ಈ ಪೈಕಿ ಯಾದಗಿರಿ, ಹಾಸನ, ಉಡುಪಿ, ವಿಜಯಪುರ, ಬೀದರ್, ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ 47 ಮಂದಿ ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆಯುಳ್ಳವರಾಗಿದ್ದಾರೆ. 

ಬೆಳಗಾವಿಯ 13 ಜನರು ಜಾರ್ಖಂಡ್ ನಿಂದ, ಚಿತ್ರದುರ್ಗದ 20 ಮಂದಿ, ಬೆಂಗಳೂರಿನ ಒಬ್ಬರು ತಮಿಳುನಾಡಿನಿಂದ, ದಾವಣಗೆರೆಯ ಒಬ್ಬರು ಗುಜರಾತ್ ಪ್ರವಾಸದ ಹಿನ್ನೆಲೆಯುಳ್ಳವರಾಗಿದ್ದಾರೆ. ಇನ್ನು ದಕ್ಷಿಣ ಕನ್ನಡದ ಮೂವರು, ಬಾಗಲಕೋಟೆಯ ಒಬ್ಬ ವ್ಯಕ್ತಿ ಖತಾರ್ ದೇಶದಿಂದ ವಾಪಸ್ಸಾದವರಾಗಿದ್ದಾರೆ. 

ಉಳಿದಂತೆ ಕೋಲಾರದಲ್ಲಿ ಪಿ.1946 ಸೋಂಕಿತನಿಂದ ಇಬ್ಬರಿಗೆ, ದಾವಣೆಗೆರೆಯಲ್ಲಿ ಪಿ.1378 ಸೋಂಕಿನಿಂದನಾಲ್ವರಿಗೆ, ಪಿ.933 ಸೋಂಕಿತನಿಂದ ಇಬ್ಬರಿಗೆ, ಪಿ.9.., ಪಿ.627 ಸೋಂಕಿತರಿಂದ ತಲಾ ಒಬ್ಬರಿಗೆ, ಉಸಿರಾಟ ತೊಂದರೆ, ಇನ್ ಫ್ಲುಯೆನ್ಜಾ ಜ್ವರಿಂದ ಬಳಲುತ್ತಿದ್ದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನು ಬಳ್ಳಾರಿ ಮತ್ತು ಬೆಂಗಳೂರಿನ ತಲಾ ಒಂದೊಂದು ಪ್ರಕರಣಗಳಲ್ಲಿ ಸೋಂಕಿಗೆ ಕಾರಣ ಪತ್ತೆ ಹಚ್ಚಲಾಗುತ್ತಿದೆ. 

(KANNADA PRABHA)