X Close
X

ಮಹಾರಾಷ್ಟ್ರ: ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ಮೇಲೆ ಯುವಕನಿಂದ ಹಲ್ಲೆ!


Slaped
Bengaluru:ಮುಂಬೈ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಬಲವರ್ದನೆ ಸಚಿವ ರಾಮ್ ದಾಸ್ ಅಠಾವಳೆ ಮೇಲೆ ಹಲ್ಲೆ ನಡೆಸಲಾಗಿದೆ. ಅಂಬರ್ ನಾಥ್ ನಲ್ಲಿ  ಈ ಘಟನೆ ನಡೆದಿದ್ದು, ಯುವಕನೋರ್ವ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ್ದಾನೆ.

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿಸಿ ಹೊರಗೆ ಬಂದ  ರಾಮ್ ದಾಸ್ ಅಠಾವಳೆ ಮೇಲೆ ಗೊಸಾವಿ ಎಂಬ ಯುವಕ ಹಲ್ಲೆ ನಡೆಸಿದ್ದಾನೆ.
ತಕ್ಷಣ ಆತನನ್ನು ಹಿಡಿದ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಆತ ಕೆಳಗೆ ಬಿದ್ದರೂ ಬಿಟ್ಟರೂ ಬಿಟ್ಟಿಲ್ಲ, ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದೆ.

ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.