X Close
X

ಬುಲೆಟ್ ರೈಲು ಯೋಜನೆ ಕುರಿತು ಮರು ಪರಿಶೀಲನೆ: ಮಹಾ ಸಿಎಂ ಉದ್ಧವ್ ಠಾಕ್ರೆ


bullet-098
Bengaluru:

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ರದ್ದುಗೊಳಿಸುವ ಸೂಚನೆ ನೀಡಿದ್ದಾರೆ.

ಮುಂಬೈ - ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ ಸೇರಿದಂತೆ ಸದ್ಯ ಪ್ರಗತಿಯಲ್ಲಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಮರು ಪರಿಶೀಲಿಸುವಂತೆ ಉದ್ಧವ್ ಠಾಕ್ರೆ ಅವರು ಆದೇಶಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ ಠಾಕ್ರೆ, ಬುಲೆಟ್ ರೈಲು ಯೋಜನೆಗೆ ರೈತರು ಮತ್ತು ಬುಡಕಟ್ಟು ಜನಾಂಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಈ ಸರ್ಕಾರ ಜನ ಸಾಮಾನ್ಯರ ಪರವಾಗಿದೆ. ಹೀಗಾಗಿ ನಾವು ಬುಲೆಟ್ ರೈಲು ಯೋಜನೆ ಕುರಿತು ಮರು ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ ಅರೆ ಮೆಟ್ರೋ ಶೆಡ್ ಕಾಮಗಾರಿಗೆ ತಡೆ ನೀಡಿದಂತೆ ಬುಲೆಟ್ ರೈಲು ಯೋಜನೆಗೆ ತಡೆ ನೀಡಿಲ್ಲ ಎಂದಿದ್ದಾರೆ.

ಇದೇ ವೇಳೆ ರಾಜ್ಯದ ಹಣಕಾಸು ಸ್ಥಿತಿ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸುವುದಾಗಿ ಸಿಎಂ ತಿಳಿಸಿದ್ದಾರೆ.

ಇನ್ನು, ಜನ ಸಾಮಾನ್ಯರ ಮೇಲೆ ಬುಲೆಟ್ ರೈಲು ಯೋಜನೆಯ ಹೊರೆ ಹಾಕುವುದಿಲ್ಲ. ನಮಗೆ ರೈತರ, ಬಡವರ ಹಿತ ಮುಖ್ಯ ಮತ್ತು ರಾಜ್ಯದ ಹಣಕಾಸು ಸ್ಥಿತಿಯೂ ಸರಿ ಇಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಹೇಳಿದ್ದಾರೆ.