ರಣಬೀರ್ ಕಪೂರ್ ಸದ್ಯ ತಮ್ಮ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ರಣಬೀರ್ ಜೊತೆಗೆ, ಚಿತ್ರದಲ್ಲಿ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಕೂಡ ನಟಿಸಿದ್ದಾರೆ.
ಬ್ರಹ್ಮಾಸ್ತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 6 ರ ರಾತ್ರಿ 11.30 ರವರೆಗೆ 1,31,000 (ಪಿವಿಆರ್, ಸಿನಿಪ್ಲೆಕ್ಸ್, ಐನಾಕ್ಸ್‌ನಲ್ಲಿ) ಬ್ರಹ್ಮಾಸ್ತ್ರದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಸಾಂಕ್ರಾಮಿಕ ರೋಗದ ನಂತರದ ಇತರೆ ಚಲನಚಿತ್ರಗಳ ಆರಂಭಿಕ ದಿನದ ಮುಂಗಡ ಬುಕಿಂಗ್ ಅನ್ನು ರಣಬೀರ್ ಅವರ ಬ್ರಹ್ಮಾಸ್ತ್ರ ಮೀರಿಸಿದೆ.
ಬ್ರಹ್ಮಾಸ್ತ್ರಕ್ಕೆ ಮಾರಾಟವಾಗಿರುವ ಟಿಕೆಟ್‌ಗಳ ಸಂಖ್ಯೆ ಇಂದಿನಿಂದ ಮತ್ತಷ್ಟು ಬದಲಾಗುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗದ ನಂತರ, ಬ್ರಹ್ಮಾಸ್ತ್ರವು ಆರಂಭಿಕ ದಿನದ ಮುಂಗಡ ಬುಕಿಂಗ್‌ನ ಭಾಗವಾಗಿ ಗರಿಷ್ಠ ಸಂಖ್ಯೆಯ ಟಿಕೆಟ್‌ಗಳನ್ನು ಮಾರಾಟ ಮಾಡಿದ ಎರಡನೇ ಹಿಂದಿ ಸಿನಿಮಾವಾಗಿದೆ. ಆದಾಗ್ಯೂ, ಚಿತ್ರವು ಇನ್ನೂ ಯಶ್ ಅಭಿನಯದ ಹಿಂದಿ ಅವರತರಣಿಕೆಯ ಕೆಜಿಎಫ್ 2 ಗಿಂತ ಹಿಂದುಳಿದಿದೆ.
ಇತರೆ ಚಿತ್ರಗಳ ಮುಂಗಡ ಬುಕ್ಕಿಂಗ್ ಅಂಕಿಅಂಶ
ಕೆಜಿಎಫ್ 2- 5,05,000
ಬ್ರಹ್ಮಾಸ್ತ್ರ (ಮಂಗಳವಾರ ರಾತ್ರಿ 11.30ರವರೆಗೆ)- 1, 31,000
83- 1,29,000
ಲಾಲ್ ಸಿಂಗ್ ಚಡ್ಡಾ- 64,000
ಗಂಗೂಬಾಯಿ ಕಾಟಿಯಾವಾಡಿ- 61,000
ಜಗ್ಗುಗ್ ಜೀಯೋ - 56,000
ಶಂಶೇರಾ - 50,000
ಸಾಮ್ರಾಟ್ ಪೃಥ್ವಿರಾಜ್ - 45,000
ಬ್ರಹ್ಮಾಸ್ತ್ರದ ಬಾಕ್ಸ್ ಆಫೀಸ್ ಭವಿಷ್ಯ
ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಬ್ರಹ್ಮಾಸ್ತ್ರದ ಆರಂಭಿಕ ದಿನದ ಬಾಕ್ಸ್ ಆಫೀಸ್ ಸಂಖ್ಯೆಯನ್ನು ಭವಿಷ್ಯ ನುಡಿದಿದ್ದಾರೆ. ಹೀಗಾಗಿ, ಚಿತ್ರ ಬಿಡುಗಡೆಯಾದ ಮೊದಲನೇ ದಿನದಂದು ಇದು 25 ಕೋಟಿ ರೂಪಾಯಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದಿದ್ದಾರೆ.
(KANNADA PRABHA)