X Close
X

ಬಾನಲ್ಲಿ ಚಮತ್ಕಾರ ಮೂಡಿಸಿದ ಭಾಸ್ಕರ! ಕಣ್ತುಂಬಿಕೊಂಡ ಬೆಂಗಳೂರಿಗರು 


sun

ಬೆಂಗಳೂರು: ನಗರದ ಹೊರವಲಯದಲ್ಲಿ ಸೋಮವಾರ ಸೂರ್ಯ ಚಮತ್ಕಾರ ಮೂಡಿಸಿದ್ದಾನೆ. ಸೂರ್ಯನ ಸುತ್ತ ರಿಂಗ್ ಗೋಚರವಾಗಿದೆ. ಈ ದೃಶ್ಯ ಕಂಡುಬಂದಿರುವುದು ಬೆಂಗಳೂರಿನ ರಾಮೋಹಳ್ಳಿಯಲ್ಲಿ. ಖಗೋಳ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿದ್ದು ಹಲವರು ಈ ಸಂದರ್ಭವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.

ಆರಂಭದಲ್ಲಿ ಹಸಿರು ನಂತರ ನೀಲಿ, ನಂತರ ಹಳದಿ ಬಣ್ಣದಲ್ಲಿ ಸೂರ್ಯನ ಸುತ್ತ ಬಳೆ ಸೃಷ್ಟಿಯಾದಂತೆ ಬಾನಂಗಳದಲ್ಲಿ ಕಂಡುಬಂದಿದೆ.ನಾಡಿದ್ದು ಮೇ 26ರಂದು ಚಂದ್ರಗ್ರಹಣವಿದ್ದು ಅದಕ್ಕೂ ಮುನ್ನ ಸೂರ್ಯ ತನ್ನ ವಿಶೇಷ ಪ್ರಭೆಯನ್ನು ಬೀರಿದ್ದಾನೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಬರಿಗಣ್ಣಿನಲ್ಲಿ ಇದು ಗೋಚರವಾಗಿದೆ.

ಸೂರ್ಯನ ಈ ವಿಶೇಷ ಪ್ರಭಾವಳಿ ಬಗ್ಗೆ ಖಗೋಳ ವಿಜ್ಞಾನಿಗಳು ವಿಶ್ಲೇಷಣೆ ನಡೆಸಿ ಏನಿದು ಎಂದು ಹೇಳಬೇಕಿದೆ.

ಸೂರ್ಯನ ಪ್ರಭಾವಲಯ?: ಸೂರ್ಯನ ಸುತ್ತ 22 ಡಿಗ್ರಿಯಲ್ಲಿ ಗೋಳಾಕಾರದಲ್ಲಿ ಕಾಮನಬಿಲ್ಲು ರೂಪದಲ್ಲಿ ಪ್ರಭಾವಳಿ ಕಂಡುಬಂದಿದೆ. 

(KANNADA PRABHA)