X Close
X

ಪಾಕ್ ಕ್ರಿಕೆಟಿಗರ ಮತ್ತೊಂದು ಹಾಸ್ಯಾತ್ಮಕ ರನೌಟ್: ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ ವೈರಲ್!


Pak-Cricketers
ಲಾಹೋರ್: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಸೋತು ಸರಣಿ ಸೋಲು ಕಂಡಿದೆ. ಈ ಮಧ್ಯೆ ಪಾಕ್ ಬ್ಯಾಟ್ಸ್ ಮನ್ ಗಳ ಹಾಸ್ಯಾತ್ಮಕ ರನೌಟ್ ನೋಡಿದ ನೆಟಿಗರು ಪಾಕ್ ನಾಯಕ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಮೊದಲ ಟಿ20 ಪಂದ್ಯದ ಈ ಹಾಸ್ಯಾತ್ಮಕ ರನೌಟ್ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೆಟಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡಿ ಪಾಕಿಗಳ ಕಾಲೆಳೆಯುತ್ತಿದ್ದಾರೆ. 

  
 
ಲಂಕಾ ಬೌಲರ್ ಇಸುರು ಉದಾನ ಬೌಲಿಂಗ್ ಇಫ್ತಿಕರ್ ಅಹ್ಮದ್ ಆಫ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ಹಿಡಿದು ಬೌಲರ್ ಕೈಗೆ ಎಸೆದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ರನ್ ಪಡೆಯುವ ಆತುರದಲ್ಲಿ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ರನ್ ಬೇಡ ಎಂದು ಕೂಗುತ್ತಿದ್ದರು ಓಡಿದರು ಪರಿಣಾಮ ಇಫ್ತಿಕರ್ ರನೌಟ್ ಗೆ ಬಲಿಯಾಗಬೇಕಾಯಿತು. 

Running between the wickets - Pakistani style #PAKvSL pic.twitter.com/3UbXC7AQmj

— Saj Sadiq (@Saj_PakPassion) October 5, 2019
I think MCC wanted to remove Run-out from dismissal but Pakistan didn't want it. So they try to convince them till now with their hilarious Run-outs.

— Silly Point (@FarziCricketer) October 5, 2019
ಒಟ್ಟಿನಲ್ಲಿ ಸಮನ್ವಯದ ಕೊರತೆಯಿಂದ ಪಾಕ್ ಕ್ರಿಕೆಟಿಗರು ಸಾಕಷ್ಟು ಸಲ ಈ ರೀತಿ ರನೌಟ್ ಆಗಿ ಹಾಸ್ಯಾಸ್ಪದಕ್ಕೆ ಸಿಲುಕುತ್ತಿದ್ದಾರೆ. 

Sarfaraz is now on the crease for more than 10 overs now and he is playing so damn poor could have done a favor if he had been runout instead of Iftikhar #PAKvSL

— Zubair Hanif (@Arsenalist04) October 5, 2019 (KANNADA PRABHA)