X Close
X

ನಟಿ ದೀಪಿಕಾ ಪಡುಕೋಣೆ ಸೂಕ್ತ ಸಲಹೆಗೆ ನನ್ನಂತಹ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕು: ಯೋಗ ಗುರು ರಾಮ್'ದೇವ್


ramdev

ಇಂದೋರ್: ಸೂಕ್ತ ಸಲಹೆಗಳಿಗಾಗಿ ನಟಿ ದೀಪಿಕಾ ಪಡುಕೋಣೆಯವರು ನನ್ನಂತಹ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಯೋಗ ಗುರು ರಾಮ್'ದೇವ್ ಅವರು ಹೇಳಿದ್ದಾರೆ. 

ಜೆಎನ್'ಯು ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ದೀಪಿಕಾ ಭಾಗಿಯಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ, ಸಮಾಜ ಹಾಗೂ ಸಾಂಸ್ಕೃತಿಕ ವಿಚಾರಗಳ ಕುರಿತು ದೀಪಿಕಾ ಅಧ್ಯಯನ ನಡೆಸುವ ಅಗತ್ಯವಿದೆ. ನಮ್ಮ ದೇಶದ ಬಗ್ಗೆ ದೀಪಿಕಾ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಅವರಿಗೆ ಅರಿವು ಮೂಡಲಿದೆ. ಆ ಬಳಿಕವೇ ಅವರು ನಿರ್ಧಾರ ಕೈಗೊಳ್ಳಲೂ ಸಾಧ್ಯವಾಗುತ್ತದೆ. ಸೂಕ್ತ ಸಲಹೆಗಳಿಗೆ ದೀಪಿಕಾ ನನ್ನಂತಹ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

(KANNADA PRABHA)