X Close
X

ದೇಶ ವಿರೋಧಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಹೆಮ್ಮೆ ಇದೆ: ಸೂಲಿಬೆಲೆ


chakravarthy-sulibele-2
Bengaluru:

ಹಾವೇರಿ: ದೇಶ ವಿರೋಧಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. 

ಡಿ.22 ರಂದು ಟೌನ್ ಹಾಲ್ ನಲ್ಲಿ ತಮ್ಮ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹತ್ಯೆಗೆ ಎಸ್ ಡಿಪಿಐ ಸಂಘಟನೆ ಸಂಚು ರೂಪಿಸಿದ್ದರ ಕುರಿತು ಹಾವೇರಿಯ ವಿವೇಕಾನಂದ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

"ಇಂದು ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಡಿ.22 ರಂದು ಸಿಎಎ ಪರ ನಡೆದ ಕಾರ್ಯಕ್ರಮದಲ್ಲೇ ನನ್ನ ಮೇಲೆ ಕಲ್ಲು ಎಸೆದಿದ್ದರು ಅಂದು ನಡೆದ ಘಟನೆಯನ್ನ ಪೊಲೀಸ್ ಕಮಿಷನರ್ ಗೆ ತಿಳಿಸಿದ್ದೆ ಎಂದರು.  

ದೇಶವನ್ನು ಅಸ್ಥಿರಗೊಳಿಸುವ, ತುಂಡು, ತುಂಡು ಮಾಡುವ ಉದ್ದೇಶ ಹೊಂದಿರುವ ವ್ಯಕ್ತಿಗಳು ನನ್ನ ಕೊಲೆಗೆ ಯತ್ನಿಸುತ್ತಾರೆ ಎಂಬುದು ಆಶ್ಚರ್ಯಕರ. ಹಿಂದೂ ಸಮಾಜ ಪರವಾಗಿ ಹೋರಾಟ ಮಾಡಿದರೆ ಕೊಲೆ ಬೆದರಿಕೆಗಳು ಹೆಚ್ಚಾಗುತ್ತಿವೆ. ಇಂಥವರನ್ನು ಸರ್ಕಾರ ಸೂಕ್ತವಾಗಿ ವಿಚಾರಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆ ನಿರ್ಮಾಣ ಮಾಡಬೇಕು ಎಂಬ ಕನಸು ಇಂತಹ ಕೊಲೆಗಾರರಿಗೆ ಇದೆ. ಆದರೆ ಇಂತಹ ಸಂಘಟನೆಗಳು ಹತ್ತಿಕ್ಕಲು ನಾವು ಅಡ್ಡಗಾಲು ಆಗಿದ್ದೇವೆ ಕೊನೆ ಉಸಿರು ಇರೋವರೆಗೂ ನಾನು ಹೇಗೆ ಸತ್ತರು ರಾಷ್ಟ್ರಕ್ಕಾಗಿ ಸಾಯ್ತೀನಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.