X Close
X

ದೆಹಲಿ ಗಢಗಢ: ಶತಮಾನದ ದಾಖಲೆ ಬ್ರೇಕ್ 2.4 ಕ್ಕೆ ಕುಸಿದ ತಾಪಮಾನ


delhi-cold

ನವದೆಹಲಿ: ಭಾರೀ ಚಳಿಗೆ ರಾಜಧಾನಿ ದೆಹಲಿ ಗಢ ಗಢ ನಡುಗುತ್ತಿದ್ದು, ಮೂವತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ. 

ದೆಹಲಿಯಲ್ಲಿಂದು ಬೆಳಿಗ್ಗೆ 2.4 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಇನ್ನು ದಟ್ಟ ಮಂಜಿನಿಂದಾಗಿ ದೆಹಲಿಯಲ್ಲಿ ವಿಮಾನಗಳ ಹಾರಾಟವನ್ನೂ ರದ್ದು ಮಾಡಲಾಗಿದೆ. 

ದಟ್ಟ ಮಂಜು ಮತ್ತು ಕಲುಷಿತ ಹೊಗೆ ಸೇರಿ ದೆಹಲಿಯ ಹವಾಮಾನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು ಮಾಸ್ಕ್ ಗಳಿಲ್ಲದೆ ಜನರು ಹೊರಗೆ ಬರುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. 

ಕೇವಲ ದೆಹಲಿಯಷ್ಟೇ ಅಲ್ಲದೆ, ಉತ್ತರ ಭಾರತದ ಹಲವೆಡೆ ತೀವ್ರ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರಪ್ರದೇ, ಪಂಜಾಬ್, ಹರಿಯಾಣ, ಚಂಡೀಗಢ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಚಳಿ ಇರುವುದಾಗಿ ವರದಿಗಳು ತಿಳಿಸಿವೆ. ಇನ್ನು ಕಾಶ್ಮೀರದಲ್ಲಂತೂ ಚಳಿ ಮಿತಿ ಮೀರಕಿದ್ದು, ದಾಲ್ ಸರೋವರ ಕಲ್ಲಾಗಿದೆ. ಶ್ರೀನಗರ ಹಾಗೂ ಕೆಲವ ಭಾಗಗಳಲ್ಲಿ ತೀವ್ರ ಮಂಜು ಆವರಿಸಿವೆ. 

(KANNADA PRABHA)