X Close
X

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಮೊದಲ ದಿನವೇ ಭಾರತಕ್ಕೆ ಸ್ವರ್ಣ ಸಂಭ್ರಮ


puniya
Bengaluru:ಕ್ಸಿಯಾನ್(ಚೀನಾ) ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು. 
65 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಪುನಿಯಾ ಈ ಸಾಧನೆ ಮಾಡಿದ್ದಾರೆ. ಚಿಆನಾದ ಎದುರಾಳಿಗೆ ಮೊದಲ ಸುತ್ತಿನಲ್ಲಿ  2-5 ಅಂತರದಿಂದ ಸೋತಿದ್ದ ಪುನಿಯಾ ಕಡೆಗೆ ಅಂತಿಮವಾಗಿ 12-7 ಅಂತರದ ಜಯ ಸಾಧಿಸಿದ್ದರು. 
ಮಂಗಳವಾರದಿಂದ ಪ್ರಾರಂಬವಾಗಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ಮೊದಲ ದಿನ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಇದಾಗಿದೆ.
2017ರ ಸಾಲಿನಲ್ಲಿ ಪುನಿಯಾ ಇದೇ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದರು.