ಏರ್ ಗನ್ ಚಾಂಪಿಯನ್ ಶಿಪ್: ಭಾರತಕ್ಕೆ 16 ಸ್ವರ್ಣ
Bengaluru:ನವದೆಹಲಿ: ತೈಪೆಯ ಟಾವೋವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದ್ದು, 16 ಸ್ವರ್ಣ, 5 ಬೆಳ್ಳಿ, 4 ಕಂಚಿನ ಪದಕಗಳು ಸೇರಿದಂತೆ ಒಟ್ಟು 25 ಪದಕಗಳನ್ನು ಗೆದ್ದು ಬೀಗಿದೆ.
ಯಶ್ ವರ್ಧನ್ ಹಾಗೂ ಶ್ರೇಯಾ ಅಗರ್ ವಾಲ್ ಅವರು ತಲಾ ಮೂರು ಸ್ವರ್ಣ ಗೆದ್ದು ಬೀಗಿದ್ದಾರೆ. ಚಾಂಪಿಯನ್ ಶಿಪ್ ನ ಕೊನೆಯ ದಿನವಾದ ಸೋಮವಾರ ಯಶ್ ವರ್ಧನ್ 10 ಮೀಟರ್ ಏರ್ ರೈಫಲ್ ಪುರುಷರ ಜೂನಿಯರ್ ಸ್ಪರ್ಧೆಯಲ್ಲಿ ಹಾಗೂ ಶ್ರೇಯಾ ಮಹಿಳಾ ವಿಭಾಗದಲ್ಲಿ ಸ್ವರ್ಣದ ನಗೆ ಬೀರಿದ್ದಾರೆ. ಈ ಶೂಟರ್ ಗಳು ತಂಡ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.
ಜೂನಿಯರ್ ಪುರಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತ ಪದಕಗಳ ಕ್ಲೀನ್ ಸ್ವೀಪ್ ಮಾಡಿದೆ. ಯಶ್ ಅವರು 249.5 ಅಂಕಗಳಿಂದ ಸ್ವರ್ಣ ಸಾಧನೆ ಮಾಡಿದರೆ, ಕೇವಲ್ ಪ್ರಜಾಪತಿ 247.3 ಅಂಕಗಳಿಂದ ರಜತ, ಐಶ್ವರ್ಯ್ ಥೋಮರ್ 226.1 ಅಂಕಗಳಿಂದ ಕಂಚು ಪಡೆದರು.
ಇನ್ನು ಮಹಿಳಾ ವಿಭಾಗದಲ್ಲಿ ಶ್ರೇಯಾ (252.5) ಸ್ವರ್ಣ, ಮೇಹುಲಿ ಘೋಷ್ (228.3) ಕಂಚು ಪಡೆದರು. ಕವಿ ಚಕ್ರವರ್ತಿ ಅವರು ನಾಲ್ಕನೇ ಸ್ಥಾನ ಪಡೆದರು. ಶ್ರೇಯಾ, ಮೇಹುಲಿ, ಕವಿ ಅವರಳನ್ನೊಳಗೊಂಡ ತಂಡ ಸ್ವರ್ಣ ಸಾಧನೆ ಮಾಡಿತು