X Close
X

ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಸರ್ಕಾರದಿಂದ 'ತಾತ್ವಿಕ' ಒಪ್ಪಿಗೆ, ಸಿದ್ಧತೆ ಪ್ರಾರಂಭ


Ganguly

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಡೆಸಲು ಬಿಸಿಸಿಐಗೆ ಕೇಂದ್ರ ಸರ್ಕಾರದಿಂದ "ತಾತ್ವಿಕ" ಒಪ್ಪಿಗೆ ಸಿಕ್ಕಿದ್ದು ಟೂರ್ನಿ ಆಯೋಜನೆಗೆ ಬೇಕಾದ ಸಕಲ ಸಿದ್ಧತೆಗಳು ಪ್ರಾರಂಭವಾಗಿದೆ. 

ಎಂಟು ಫ್ರಾಂಚೈಸಿಗಳು ತಮ್ಮ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗುವುದು. ಜೊತೆಗೆ ಕೋವಿಡ್ 19 ಪರೀಕ್ಷಾ ಮಾರ್ಗಸೂಚಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. 

ಸದ್ಯ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು ಮುಂದಿನ ಕೆಲವು ದಿನಗಳಲ್ಲಿ ಯಾವುದೇ ಸಮಯದಲ್ಲಾದರೂ ಲಿಖಿತ ಅನುಮತಿ ಬರಲಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಬಿಸಿಸಿಐ ಆದೇಶಿಸಿದಂತೆ ಆಗಸ್ಟ್ 20 ರ ನಂತರ ಹೆಚ್ಚಿನ ಫ್ರಾಂಚೈಸಿಗಳು ಯುಎಇಗೆ ತೆರಳಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಆಗಸ್ಟ್ 22 ರಂದು ಹೊರಡಲಿದೆ. 

ಕೆಲವು ಫ್ರಾಂಚೈಸಿಗಳು(ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು) ಯುಎಇಗೆ ತೆರಳುವ ಮೊದಲು ಆಯಾ ನಗರಗಳಲ್ಲಿ ತಮ್ಮ ಆಟಗಾರರಿಗಾಗಿ ಕೋವಿಡ್ 19 ಪರೀಕ್ಷೆಗಳನ್ನು ಏರ್ಪಡಿಸುತ್ತಿವೆ.

"ಎರಡು ಪರೀಕ್ಷೆಗಳು ಕಡ್ಡಾಯವಾಗಿದ್ದರೂ, ಹೆಚ್ಚಿನ ಫ್ರಾಂಚೈಸಿಗಳು ಭಾರತವನ್ನು ತೊರೆಯುವ ಮೊದಲು ಕನಿಷ್ಠ ನಾಲ್ಕು ಪರೀಕ್ಷೆಗಳನ್ನು ಮಾಡಲಿವೆ.

(KANNADA PRABHA)