ನವದೆಹಲಿ: ದೆಹಲಿಯ ಶಾಲಿಮರ್ ಬಾಗ್ ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಗಾಯಾಳುಗಳ ಪೈಕಿ ಮೂವರು ಮೃತಪಟ್ಟಿದ್ದಾರೆ.
ಶಾಲಿಮರ್ ಬಾಗ್ ನಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ ಎಂದು ಸಂಜೆ 6.05 ರ ಸುಮಾರಿಗೆ ಕರೆ ಬಂದಿದ್ದು 9 ಅಗ್ನಿಶಾಮಕ ವಾಹನ ತಕ್ಷಣವೇ ಘಟನಾ ಸ್ಥಳದಲ್ಲಿ ಕಾರ್ಯಪ್ರವೃತ್ತವಾದವು ಎಂದು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಇನ್ನು ಅಗ್ನಿ ಅವಘಡದಲ್ಲಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಕಿರಣ್(60), ಸೋಂವತಿ(57) ಮತ್ತು ಕಮ್ತಾದೇವಿ(75) ಎಂದು ಗುರುತಿಸಲಾಗಿದೆ.
ವಾಂಶಿಕ(14), ಅಕ್ಷಿತ(27), ಅಹೀನಾ(27) ಮತ್ತು ಲಜ್ವಾಂತಿ(68) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.