X Close
X

ಕನಸಿನ ಬೆನ್ನತ್ತಿ ಹೋಗಿರುವ ಮೈಸೂರಿನ ಆಟೋ ಚಾಲಕರ ಮಗಳು ಧನುಷಾ


mysuru-autodriver
Bengaluru:ಮೈಸೂರು: ಹಣಕಾಸಿನ ಮುಗ್ಗಟ್ಟು ಮೈಸೂರಿನ 19 ವರ್ಷದ ಎಂ ಆರ್ ಧನುಷಾಳ ಕನಸನ್ನು ನುಚ್ಚುನೂರು ಮಾಡಲಿಲ್ಲ. ಅದಮ್ಯ ಉತ್ಸಾಹವನ್ನು ಒಂದಿನಿತೂ ಕಡಿಮೆ ಮಾಡಿಲ್ಲ. ಇನ್ನಷ್ಟು ಅಚಲಳಾಗಿ ತನ್ನ ಹಠವನ್ನು ಸಾಧಿಸಿ ತೋರಿಸಿದ್ದಾಳೆ.
ಜುಲೈ 3ರಿಂದ 14ರವರೆಗೆ ಇಟಲಿಯ ನಪೊಲಿಯಲ್ಲಿ ನಡೆಯಲಿರುವ 30ನೇ ಬೇಸಿಗೆ ಅಥ್ಲೆಟಿಕ್ ಕ್ರೀಡೆಯಲ್ಲಿ ಧನುಷಾ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ,
ಕೆ ಆರ್ ನಗರದ ಆಟೋ ಚಾಲಕ ಮಂಜು ಮತ್ತು ಗೃಹಿಣಿ ಎಂಬಿ ರುಕ್ಮಿಣಿಯವರ ಮಗಳಾದ ಧನುಷಾಗೆ ಕ್ರೀಡೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಆಕೆಯ ಹಿರಿಯ ಸೋದರಿ ಎಂಆರ್ ಅನುಷಾಳೇ ಕಾರಣವಂತೆ. ಆಕೆ ಕೂಡ ಅಥ್ಲೆಟ್. ಇದುವರೆಗೆ 30ಕ್ಕೂ ಹೆಚ್ಚು ರಾಷ್ಟ್ರಮಟ್ಟದ, 50 ರಾಜ್ಯ ಮತ್ತು ನೂರಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಹೆಪ್ಟಾಥ್ಲಾನ್ ಕ್ರೀಡಾಸ್ಪರ್ಧೆಯಲ್ಲಿ ಧನುಷಾ ಭಾಗಿಯಾಗಿದ್ದಾಳೆ. 100 ಮೀಟರ್ ಹರ್ಡಲ್ಸ್, 200 ಮೀಟರ್ ಡ್ಯಾಶ್, 800 ಮೀಟರ್ ಓಟ, ಹೈ ಜಂಪ್,ಶಾಟ್ ಪುಟ್, ಲಾಂಗ್ ಜಂಪ್ ಮತ್ತು ಜಾವೆಲಿನ್ ಥ್ರೋದಲ್ಲಿ ಭಾಗವಹಿಸಿದ್ದಾಳೆ.
ಬಸುದೇವ ಸೊಮಾಲಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ ಕೋರ್ಸ್ ಓದುತ್ತಿರುವ ಧನುಷಾ ತನ್ನ ಬಹುತೇಕ ಸಮಯವನ್ನು ಕ್ರೀಡೆಯಲ್ಲಿಯೇ ಕಳೆಯುತ್ತಾಳೆ. ಹೆಪ್ಟಥ್ಲಾನ್ ಕ್ರೀಡೆ ಕಷ್ಟವಾಗಿದ್ದು ಅದಕ್ಕೆ ಸಾಕಷ್ಟು ಶಕ್ತಿ ಮತ್ತು ಶ್ರಮ ಬೇಕು. ದಿನಕ್ಕೆ ಕನಿಷ್ಠವೆಂದರೂ 8ರಿಂದ 9 ಗಂಟೆ ಸತತ ಅಭ್ಯಾಸ ಮಾಡುತ್ತೇನೆ. ನನಗೆ ಚಿನ್ನದ ಪದಕ ಗೆಲ್ಲುವುದು ಗುರಿ ಎನ್ನುತ್ತಾರೆ ಧನುಷಾ.
ಹೈಸ್ಕೂಲ್ ನಲ್ಲಿದ್ದಾಗ ಧನುಷಾಗೆ ತನಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದೆ, ಸಾಮರ್ಥ್ಯವಿದೆ ಎಂದು ಮನದಟ್ಟಾಯಿತಂತೆ. 5 ವರ್ಷಗಳ ಕಾಲ ಕ್ರೀಡೆ ಮತ್ತು ಯುವಜನ ಇಲಾಖೆಯಿಂದ ತರಬೇತಿ ಪಡೆದಿದ್ದಾರೆ. ಅದು ನನ್ನ ಜೀವನದಲ್ಲಿ ತಿರುವು ನೀಡಿತು ಎನ್ನುತ್ತಾಳೆ,
ಮೈಸೂರು ವಿಶ್ವವಿದ್ಯಾಲಯ ಇತಿಹಾಸದಲ್ಲಿ ಭಾರತದ ಅಂತರ ಕಾಲೇಜು ಮಟ್ಟದಲ್ಲಿ ಜಪಾನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಳು. ವಿಶ್ವಮಟ್ಟದಲ್ಲಿ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಧನುಷಾ ಪ್ರತಿನಿಧಿಸುತ್ತಿರುವುದು ಇದು ಎರಡನೇ ಬಾರಿ ಎಂದು ಖುಷಿಯಿಂದ ಅವರ ಕೋಚ್ ಎಂ ಪುನೀತ್ ಹೇಳುತ್ತಾರೆ.