X Close
X

ಸೈಯದ್ ಮೋದಿ ಚಾಂಪಿಯನ್ ಶಿಪ್:ಚಾಂಪಿಯನ್ ಪಟ್ಟ ಉಳಿಸಿಕೊಂಡ ಸಮೀರ್, ಸೈನಾಗೆ ರನ್ನರ್ ಅಪ್ ಸ್ಥಾನ


sainasameer
ನವದೆಹಲಿ: ಸೈಯದ್ ಮೋದಿ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ಪಂದ್ಯಾವಳಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಅತಿಥೇಯ ರಾಷ್ಟ್ರ ಚಾಂಪಿಯನ್ ಪಟ್ಟ ಅಲಂಕರಿಸದೆ ಟೂರ್ನಿಯನ್ನು ಕೊನೆಗೊಳಿಸುವುದಿಲ್ಲ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ. ಆದರೆ ಇನ್ನೊಂದೆಡೆ ಮಹಿಳಾ ವಿಭಾಗದ ಅಂತಿಮ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಚೀನಾದ ಹ್ಯಾನ್ ಯುಯೆ ಎದುರು ಆಘಾತಕಾರಿ ಸೋಲು ಕಂಡ ಬಳಿಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಸಮೀರ್ ಚೀನಾದ ಆರನೇ ಶ್ರೇಯಾಂಕದ ಆಟಗಾರ ಲು ಗುಅಂಗ್ ಜು ಅವರೊಡನೆ ನಡೆದ ತೀವ್ರ ಹಣಾಹಣಿಯ ಹೋರಾಟದಲ್ಲಿ 16-21, 21-19, 21-14 ಸೆಟ್ ಗಳಿಂದ ಜಯ ಸಾಧಿಸಿದರು. ಎಪ್ಪತ್ತು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಮೀರ್ ವಿಜೇತರಾಗಿ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉ:ಳಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಮಾಜಿ ಚಾಂಪಿಯನ್ ಮತ್ತು ಎರಡನೇ ಶ್ರೇಯಾಂಕದ ಸೈನಾ ನೆಹ್ವಾಲ್ 34 ನಿಮಿಷಗಳ ಫೈನಲ್ ಪಂದ್ಯದಲ್ಲಿ 27ನೇ ಶ್ರೇಯಂಕದ ಚೀನಾ ಆಟಗಾರ್ತಿ ಹ್ಯಾನ್ ಯುಯೆ ಎದುರು 18-21 8-21 ಸೆಟ್ ಗಳಿಂದ ಸೋಲು ಕಂಡಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆಯಾಗಿದ್ದ ಸೈನಾ ಈ ಕ್ರೀಡಾಕೂಟದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಇನ್ನು ಪುರುಷರ ಡಬಲ್ಸ್ ನಲ್ಲಿ ಭಾರತದ ಎಸ್.ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷಿಯಾ ಜೋಡಿ ಎದುರು ನೇರ ಸೆಟ್ ಗಳಿಂದ ಸೋತು ರನ್ನರ್ ಅಪ್ ಸ್ಥಾನ ಪಡೆದಿದ್ದರೆ ಮಹಿಳಾ ಡಬಲ್ಸ್ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಸಹ ರನ್ನರ್ ಅಪ್ ಆಗಿದೆ. (KANNADA PRABHA)