X Close
X

'ಫನ್ನಿ ಖಾನ್' ಟೀಸರ್ ನಲ್ಲಿ ಮಿಂಚಿದ ಐಶ್, ಅನಿಲ್ ಕಪೂರ್


anil-aishu1
Bengaluru:ಮುಂಬೈ: ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಹಾಗೂ ನಟಿ ಐಶ್ವರ್ಯ ರೈ ಬಚ್ಚನ್ ಪ್ರಮುಖ ಪಾತ್ರಿದಲ್ಲಿ ಅಭಿನಯಿಸಿರುವ ಫನ್ನಿ ಖಾನ್ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ.
ಒಂದು ನಿಮಿಷದ ಟೀಸರ್ ನಲ್ಲಿ 19 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾದ ಐಶ್-ಅನಿಲ್ ಜೋಡಿಗೆ ಪ್ರೇಕ್ಷಕರ ಹರ್ಷೋದ್ಗಾರವಿದ್ದು, ರಾಜಕುಮಾರ್ ರಾವ್ ಅವರು ಕಥೆ ಹೇಳಿದ್ದಾರೆ.
ಚಿತ್ರದಲ್ಲಿ ಅನಿಲ್ ಕಪೂರ್, ಐಶ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಅತುಲ್ ಮಂಜ್ರೇಕರ್ ನಿರ್ದೇಶನದ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ದಿವ್ಯಾ ದತ್ತಾ, ಕರಣ್ ಮುಖ್ಯ ಪಾತ್ರದಲ್ಲಿದ್ದಾರೆ.
ಚಿತ್ರದ ಟೀಸರ್ ಅನ್ನು ಟ್ವೀಟ್ ಮಾಡಿರುವ ಅನಿಲ್ ಕಪೂರ್ ಅವರು, ಯಾರು ತಮ್ಮ ಸ್ವಕಥೆಯನ್ನು ಬರೆಯುತ್ತಾರೋ ಅವರೇ ಫನ್ನಿ ಖಾನ್ ಎಂದು ಹೇಳಿದ್ದಾರೆ.
2000ರಲ್ಲಿ ಅನಿಲ್ -ಐಶ್ ಒಟ್ಟಿಗೆ 'ಹಮಾರಾ ದಿಲ್ ಆಪಕೇ ಪಾಸ್ ಹೇ' ಚಿತ್ರದಲ್ಲಿ ನಟಿಸಿದ್ದರು. 1999 ರಲ್ಲಿ ತೆರೆ ಕಂಡ 'ತಾಲ್' ಚಿತ್ರದಲ್ಲಿ ಕೂಡ ಐಶ್-ಅನಿಲ್ ಜೋಡಿಗೆ ಅಭಿಮಾನಿಗಳು ಉಘೇ ಎಂದಿದ್ದರು.