X Close
X

ಗೌರಿ ಲಂಕೇಶ್ ಹತ್ಯೆ; ಪಿಸ್ತೂಲ್ ಬಳಕೆಗೆ ಸ್ನೇಹಿತರಿಂದ ಸಹಾಯ ಪಡೆದಿದ್ದ ಪರಶುರಾಮ ವಾಗ್ಮೆರೆ


gauri-lankesh
ಬೆಳಗಾವಿ: ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲು ನಡೆಸಿದ ಯೋಜನೆಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿದ್ದು, ಹಲವು ಕ್ಷೇತ್ರಗಳ ಜನರು ಮುಖ್ಯ ಆರೋಪಿ ಪರಶುರಾಮ್ ವಾಗ್ಮರೆಗೆ ತಾತ್ವಿಕ ಬೆಂಬಲ ನೀಡಿದ್ದರು ಎಂದು ತಿಳಿದುಬಂದಿದೆ.

ವಾಗ್ಮೆರೆಯ ಸ್ನೇಹಿತರು ಪಿಸ್ತೂಲ್ ಬಳಕೆಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ಮಾರ್ಷಲ್ ಆರ್ಟ್ ಮತ್ತು ಕರಾಟೆಗಳಲ್ಲಿ ತರಬೇತಿ ನೀಡಿದ್ದರು. ವಾಗ್ಮೆರೆ ಗೌರಿ ಲಂಕೇಶ್ ಹತ್ಯೆಗೆ ಮುನ್ನ ಬೆಳಗಾವಿ ನಗರದಿಂದ 20 ಕಿಲೋ ಮೀಟರ್ ದೂರದಲ್ಲಿ ಜಂಬೊಟಿಯಲ್ಲಿ ಭರತ್ ಕುರ್ನೆ ಎಂಬುವವರ ಮೂರು ಎಕರೆ ರೆಸಾರ್ಟ್ ನಲ್ಲಿ ತರಬೇತಿ ಪಡೆದುಕೊಂಡಿದ್ದನು. ಭರತ್ ಕುರೆಯನ್ನು ಇತ್ತೀಚೆಗೆ ವಿಶೇಷ ತನಿಖಾ ತಂಡ ಇತ್ತೀಚೆಗೆ ಬೆಳಗಾವಿಯಲ್ಲಿ ಬಂಧಿಸಿದ್ದರು.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ವಾಗ್ಮೆರೆಗೆ ಅನೇಕ ಸಮಯಗಳವರೆಗೆ ಪಿಸ್ತೂಲ್ ಬಳಕೆಗೆ ತರಬೇತಿ, ಕರಾಟೆ ಮತ್ತು ಮಾರ್ಷಲ್ ಆರ್ಟ್ ಗಳ ತರಬೇತಿ ನೀಡಲಾಗುತ್ತಿತ್ತು. ಜಂಬೊಟೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವುದರಿಂದ ಜನರಿಗೆ ಕಾಣದಿರುವುದರಿಂದ ವಾಗ್ಮೆರೆಗೆ ಅಲ್ಲಿ ತರಬೇತಿ ನೀಡಲು ನಿರ್ಧರಿಸಲಾಯಿತು.

ಈ ಸ್ಥಳ ಅತ್ಯಂತ ದಟ್ಟ ಕಾಡು. ಅಲ್ಲಿ ಹೊಟೇಲ್, ಕೊಳವೆ ಕೆರೆ ಮತ್ತು ಖಾಸಗಿ ಕೊಳವೆ ಇದೆ. ಕೆಲವು ಯುವಕ-ಯುವತಿಯರು ಇಲ್ಲಿಗೆ ಆಗಾಗ ಭೇಟಿ ನೀಡಿ ಖಾಸಗಿ ಪಾರ್ಟಿ ಮಾಡುತ್ತಿದ್ದರು. ವಾಗ್ಮೆರೆಗೆ ಪಿಸ್ತೂಲ್ ತರಬೇತಿ ನೀಡುತ್ತಿದ್ದಾಗ ದೊಡ್ಡದೊಗಿ ಮ್ಯೂಸಿಕ್ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. (KANNADA PRABHA)