X Close
X

ಕೊನೆಗೂ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ ಡ್ಯಾನ್ಸಿಂಗ್ ಅಂಕಲ್ ಮುಂದೆನಾಯ್ತು!


Sanjeev-Shrivastava-Govinda4
Bengaluru:ತಮ್ಮ ಡ್ಯಾನ್ಸ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಡ್ಯಾನ್ಸಿಂಗ್ ಅಂಕಲ್ ಇದೀಗ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ್ದು ಅಲ್ಲದೆ ಇಬ್ಬರು ವೇದಿಕೆ ಮೇಲೆ ಕುಣಿದು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್ ಅವರು 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ ಖುದ್ಗರ್ಜ್ ಚಿತ್ರದ ಆಪ್ ಕೆ ಆ ಜಾನೆ ಸೆ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ಅಪ್ ಲೋಡ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಮೇ 30ರಂದು ಟ್ವೀಟ್ ಮಾಡಲಾದ ವಿಡಿಯೋವನ್ನು ಸಾವಿರಾರೂ ಮಂದಿ ರೀ ಟ್ವೀಟ್ ಮಾಡಿದ್ದಾರೆ.